ಕಲಬುರಗಿ: ಜಿಲ್ಲೆಯ ಅನೇಕ ಮಠಾಧೀಶರು ಸೇರಿ ನೈಜ ಘಟನೆ ಆಧಾರಿತ ‘ದಿ ಕಾಶ್ಮೀರ ಫೈಲ್ಸ್’ (The Kashmir Files) ಚಿತ್ರ ವೀಕ್ಷಣೆ ಮಾಡಿದ್ದಾರೆ.ಸೇಡಂ ಬಿಜೆಪಿ ಶಾಸಕ ರಾಜಕುಮಾರ್‌ ಪಾಟೀಲ್‌ ಸಿನಿಮಾ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ. ಐವತ್ತಕ್ಕೂ ಹೆಚ್ಚು ಮಠಾಧೀಶರು ಮತ್ತು ಬಿಜೆಪಿ ಕಾರ್ಯಕರ್ತರು ಮಿರಾಜ್ ಟಾಕಿಜ್‍ನಲ್ಲಿ ಫ್ರೀ ಶೋ ವೀಕ್ಷಣೆ ಮಾಡಿದ್ದಾರೆ.ಸಿನಿಮಾ ವಿಕ್ಷಣೆಗೂ ಮುನ್ನ ಶ್ರೀರಾಮ ಸೇನೆಯ ರಾಜ್ಯಧ್ಯಕ್ಷ, ಆಂದೋಲಾ ಮಠದ ಸಿದ್ಧಲಿಂಗ ಸ್ವಾಮಿಜಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಕಾಶ್ಮೀರದಲ್ಲಿ ನಡೆದ ಸತ್ಯ ಘಟನೆಯ ಸಿನಿಮಾವಾಗಿದೆ. ಅಲ್ಲಿನ ಮುಸ್ಲಿಂ ಆತಂಕವಾದಿಗಳಿಂದ ಹಿಂದುಗಳ ಮೇಲಿನ ಹಿಂಸೆ ಎಳೆ ಎಳೆಯಾಗಿ ಬಿಡಿಸಿ ಹೇಳಲಾಗಿದೆ. ಇದಕ್ಕಾಗಿ ಚಿತ್ರ ನಿರ್ಮಾಪಕ ಅಗ್ನಿ ಹೋತ್ರಿ ಅವರಿಗೆ ಅನಂತ ಧನ್ಯವಾದಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್ಭಾರತದ ಇತಿಹಾಸದಲ್ಲಿ ಇಂತಹ ಅನೇಕ ನೈಜ ಘಟನೆಗಳು ಮುಳುಗಿ ಹೋಗಿವೆ. ಆದರೆ ಯಾವುದೇ ನಿರ್ಮಾಪಕ, ನಿರ್ದೇಶಕರು ಸತ್ಯ ತೋರಿಸುವ ಕೆಲಸ ಮಾಡಿಲ್ಲ. ಇದೀಗ ಅಗ್ನಿ ಹೋತ್ರಿ ದಿಟ್ಟತನ ತೋರಿದ್ದಾರೆ. ಪ್ರತಿಯೊಬ್ಬ ಹಿಂದು ಈ ಚಿತ್ರ ನೋಡಲೇಬೇಕು. ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರದೇ ಇದ್ದಿದ್ದರೆ, ಈ ಸತ್ಯ ಘಟನೆಯೂ ಸಿನಿಮಾ ಆಗುತ್ತಿರಲಿಲ್ಲ ಎಂದು ಆಂದೋಲಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? Sign in to your account
Username or Email Address


Password

 Remember Me


