ಬೆಂಗಳೂರು: ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್ ನೀಡುವುದಾಗಿ ಯಲಹಂಕ ಕ್ಷೇತ್ರದ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.ರಸ್ತೆ ಗುಂಡಿಯಿಂದ ಅಶ್ವಿನ್ ಮೃತಪಟ್ಟಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ವಡೇರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 20*30 ಅಡಿ ಅಳತೆಯ ಉಚಿತ ನಿವೇಶನ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಸರ್ಕಾರದಿಂದಲೂ ಸೂಕ್ತ ಪರಿಹಾರ ಕೊಡಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಅವರು ಹೇಳಿದರು.ನಡೆದಿದ್ದೇನು..?
ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಕಡೆ ಹೋಗುವ ರಸ್ತೆಯಲ್ಲಿ ಜಲಮಂಡಳಿಯಿಂದ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಅಶ್ವಿನ್ ಮೃತಪಟ್ಟಿದ್ದರು. ಅಶ್ವಿನ್ ತಾಯಿಗೆ ಊಟ ತರಲು ಹೊರಗಡೆ ಹೋಗಿದ್ದರು. ಎಂಎಸ್ ಪಾಳ್ಯದ ಹೋಟೆಲ್ ಒಂದರಲ್ಲಿ ಆಹಾರ ಕಟ್ಟಿಸಿಕೊಂಡು ವಾಪಸ್ ಬರುವಾಗ ಈ ಅಪಘಾತ ನಡೆದಿತ್ತು. ಇದನ್ನೂ ಓದಿ: LPG ಸಿಲಿಂಡರ್ ಸ್ಫೋಟ: ನಾಲ್ವರು ಸಾವು, 15 ಜನರಿಗೆ ಗಂಭೀರ ಗಾಯಬೀದಿದೀಪ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಗುಂಡಿ ಇರುವುದು ಕಂಡಿರಲಿಲ್ಲ. ಇದರಿಂದಾಗಿ ಜಲಮಂಡಳಿಯವರು ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ವಿನ್‍ಗೆ ತೀವ್ರ ಗಾಯಗೊಂಡಿದ್ದ. ಇದನ್ನು ನೋಡಿದ ಸ್ಥಳೀಯರು ಅಂಬುಲೆನ್ಸ್ ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಸ್ಥಳೀಯರೇ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ.ಇತ್ತ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟ ಜಾಗದಲ್ಲಿ ಮೃತ ಅಶ್ವಿನ್ ಸ್ನೇಹಿತರು ಜಮಾಯಿಸಿ ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ಮೃತ ಅಶ್ವಿನ್ ಪೋಷಕರು ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಬಿಬಿಎಂಪಿ, ಬಿಡ್ಲೂಎಸ್ಸ್ಬಿ ಮೇಲೆ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


