ಹಾವೇರಿ: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹಾವೇರಿ ಸಮೀಪದ ಹೊಸಳ್ಳಿ ಗ್ರಾಮದ ಬಳಿ ನಡೆದಿದೆ.ಮೃತರನ್ನು ಹಾವೇರಿಯ ಬಸವೇಶ್ವನಗರ ನಿವಾಸಿ ಬೆಲ್ಲದ ವ್ಯಾಪಾರಿ ವಿಜಯ ಕವಲಗುಡ್ಡ (38), ಯಾಲಕ್ಕಿ ಓಣಿಯ ನಿವಾಸಿ ಕಬ್ಬಿಣದ ಕೃಷಿ ಉಪಕರಣಗಳ ವ್ಯಾಪಾರಿಯಾಗಿದ್ದ ಗಣೇಶ ರಟಗಲ್ (38) ಗುರುತಿಸಲಾಗಿದೆ.ಮೃತರು ತೊಗರ್ಸಿ ಜಾತ್ರೆಗೆ ಹೋಗಿದ್ದರು. ಅಲ್ಲಿಂದ ಮರಳಿ ವಾಪಸ್ಸು ಹಾವೇರಿಗೆ ಬರುತ್ತಿದ್ದ ವೇಳೆ ಹಾನಗಲ್-ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಟ್ರಕ್, ಟ್ರ್ಯಾಕ್ಟರ್ ಡಿಕ್ಕಿ- ಕೆಲಸಕ್ಕೆ ಹೊರಟಿದ್ದ ನಾಲ್ವರು ಸಾವುವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಅಪ್ಪನ ಜೊತೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ 4ನೇ ಕ್ಲಾಸ್ ವಿದ್ಯಾರ್ಥಿSign in to your account
Username or Email Address


Password

 Remember Me


