ಮುಚ್ಚುಮರೆ ಇಲ್ಲದೇ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುವ ನಟಿ ಕಂಗನಾ ರಣಾವತ್, ತನ್ನದೇ ಸಿನಿಮಾ ರಂಗದ ಮೇಲೆ ಕಿಡಿಕಾರಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ನಟ, ನಟಿಯರು ಮತ್ತು ನಿರ್ದೇಶಕರು ಮೌನ ತಾಳಿದ್ದಕ್ಕೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್ದೇಶಕ್ಕೆ ದೇಶವೇ ಸಿನಿಮಾವನ್ನು ಕೊಂಡಾಡುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದೆ. ಕೊರೋನಾ ನಂತರದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾವಿದು ಎನ್ನುವ ಹೆಗ್ಗಳಿಕೆಗೂ ಚಿತ್ರ ಪಾತ್ರವಾಗಿದೆ. ಆದರೂ, ಬಾಲಿವುಡ್ ಮೌನ ತಾಳಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಲಿವುಡ್ ಕೆಲವರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಇಂತಹ ಚಿತ್ರಗಳ ಬಗ್ಗೆ ಅವರಿಗೆ ಯಾವಾಗಲೂ ತಾತ್ಸಾರ ಎಂದೂ ಅವರು ಹೇಳಿಕೊಂಡಿದ್ದಾರೆ. ಇಂತಹ ಚಿತ್ರಗಳನ್ನು ಎಲ್ಲರಿಗೂ ತಲುಪಿಸಲು ಬಾಲಿವುಡ್ ಏಕೆ ಯೋಚಿಸುತ್ತಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?ಈ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕೆಂದು ಕೆಲ ರಾಜ್ಯಗಳು ತೆರಿಗೆ ವಿನಾಯತಿ ಕೊಟ್ಟಿವೆ. ಕೆಲ ಶಾಸಕರು ಉಚಿತವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಿನಿಮಾ ತೋರಿಸುತ್ತಿದ್ದಾರೆ. ನೆನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಚಿತ್ರ ನೋಡಿದ್ದಾರೆ. ಇದನ್ನೂ ಓದಿ : exclusive photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಾಶ್ಮೀರ ಪಂಡಿತರ ಹತ್ಯ ಮತ್ತು ಅವರ ವಲಸೆ ಕುರಿತಾದ ಸಿನಿಮಾ. ಕನ್ನಡದ ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ, ಕೆಲ ಕಡೆ ವಿರೋಧವೂ ‍ವ್ಯಕ್ತವಾಗಿದೆ.Sign in to your account
Username or Email Address


Password

 Remember Me


