ಚಿಕ್ಕಬಳ್ಳಾಪುರ: ಬೈಕ್ ಮೇಲೆ ಕ್ಯಾಂಟರ್ ಹರಿದು ಕಾಲೇಜು ವಿದ್ಯಾರ್ಥಿಯೊರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚುಂಚೇಗೌಡನ ಹೊಸಹಳ್ಳಿ ಬಳಿ ನಡೆದಿದೆ.ದೊಡ್ಡ ಬೆಳವಂಗಲ ಬಳಿಯ ಅಂಬಲಗೆರೆ ಗ್ರಾಮದ ವರುಣ್(18) ಮೃತ ವಿದ್ಯಾರ್ಥಿ. ಅಂದಹಾಗೆ ದೊಡ್ಡಬಳ್ಳಾಪುರ ನಗರದ ಖಾಸಗಿ ಕಾಲೇಡ ವ್ಯಾಸಂಗ ಮಾಡುತ್ತಿದ್ದ ವರುಣ್ ತನ್ನ ತಂದೆ ಸಿದ್ದಗಂಗಪ್ಪನ ಜೊತೆ ಬೈಕ್‍ನಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸುತ್ತಿದ್ದ. ಆದರೆ ಮಾರ್ಗ ಮಧ್ಯೆ ಕ್ಯಾಂಟರ್ ಬೈಕ್ ಗೆ ಡಿಕ್ಕಿಯಾಗಿ ವರುಣ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ವಿಜೇತ ನಟ ವಿಲಿಯಂ ಹರ್ಟ್ ಇನ್ನಿಲ್ಲತಂದೆ ಸಿದ್ದಗಂಗಪ್ಪ ಸಣ್ಣ, ಪುಟ್ಡ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ದೊಡ್ಡಬಳ್ಳಾಪುರ ನಗರದ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಘಟನೆ ನಂತರ ಕ್ಯಾಂಟರ್ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್Sign in to your account
Username or Email Address


Password

 Remember Me


