ಖ್ಯಾತ ನಿರೂಪಕಿ ಅನುಶ್ರೀ ಇಂದು ‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ನಡೆಸಬೇಕಾದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ.ಅಪ್ಪು ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಅವರ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ‘ಜೇಮ್ಸ್’ ಸಿನಿಮಾದ ಪ್ರಿ-ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರಾಬಳಗ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಈವೆಂಟ್ ನಿರೂಪಣೆಯನ್ನು ಅನುಶ್ರೀ ವಹಿಸಿದ್ದರು. ಈ ವೇಳೆ ಪುನೀತ್ ಅವರನ್ನು ನೆನೆದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್ಅಪ್ಪುವಿನ ಅಭಿಮಾನಿಗಳಲ್ಲಿ ಅನುಶ್ರೀ ಸಹ ಒಬ್ಬರಾಗಿದ್ದು, ಅವರೇ ನನ್ನ ನೆಚ್ಚಿನ ನಟ ಎಂದು ಹಲವು ಶೋಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇಂದು ಅವರಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ನೆನೆದು ಕಣ್ಣಿರಿಟ್ಟಿದ್ದಾರೆ.ಪವರ್ ಸ್ಟಾರ್‌ನನ್ನು ನೆನೆದರೆ ಎಲ್ಲರ ಕಣ್ಣಲ್ಲಿ ನೀರುಬರುವುದು ಸಹಜ. ಅದರಲ್ಲಿಯೂ ಅವರನ್ನು ಹತ್ತಿರದಿಂದ ನೋಡಿದವರಿಗೆ ಮತ್ತು ಅಭಿಮಾನಿಗಳಿಗೆ ಅಪ್ಪು ಇಲ್ಲ ಎಂಬ ಸುದ್ದಿಯನ್ನು ಇನ್ನೂ ಅರಗಿಸಿಕೊಂಡಿಲ್ಲ. ಅಪ್ಪು ಅಗಲಿದಾಗಿನಿಂದ ಅವರ ಅಭಿಮಾನಿಗಳು ಅವರಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ.ಇಂದು ಸಹ ಈವೆಂಟ್‍ನಲ್ಲಿ ಡ್ಯಾನ್ಸ್ ಕಲಾವಿದರು ಪುನೀತ್ ಅಭಿನಯದ ಹಾಡುಗಳಿಗೆ ಡ್ಯಾನ್ಸ್ ಮಾಡಿ ನಮನ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಬೇಡವೆಂದ ಸಾಂಗ್ ಮತ್ತೆ ಪ್ರೇಕ್ಷಕರ ಮುಂದೆ – ಯಾವುದು ಈ ಸಾಂಗ್?Sign in to your account
Username or Email Address


Password

 Remember Me


