ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ‘ಜೇಮ್ಸ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈವೆಂಟ್‍ನಲ್ಲಿ ನಟ, ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಅಪ್ಪುನನ್ನು ನೆನೆದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.ವೇದಿಕೆ ಮೇಲೆ ಅಪ್ಪುನನ್ನು ನೆನೆದು ಮಾತನಾಡಿದ ಅವರು, ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನ ದೇವರು ನಿಲ್ಲಿಸಿ ಬಿಟ್ಟ. ಆದರೆ ನಾನು ಕುಂಟ್ಕೊಂಡು ಓಡಾಡಿಕೊಂಡು ಇರುತ್ತೇನೆ. ನನ್ನನ್ನು ದೇವರು ಇನ್ನು ಉಳಿಸಿದ್ದಾನೆ. ಈ ಈವೆಂಟ್ ನೋಡುತ್ತಿದ್ರೆ ನಾನು ಏಕೆ ಬದುಕಿದ್ದೇನೆ ಅನಿಸಿತು ಎಂದು ನೋವಿನಲ್ಲಿ ಮಾತನಾಡಿದರು. ಇದನ್ನೂ ಓದಿ: ಭಾವುಕರಾಗಿ ಕಾರ್ಯಕ್ರಮ ಶುರು ಮಾಡಿದ ಅನುಶ್ರೀನನಗೆ ಹಾರ್ಟ್ ಅಟ್ಯಾಕ್ ಆಗಿ, ಸ್ಟ್ರೋಕ್ ಬಂದ್ರು ದೇವರು ನನ್ನನ್ನು ಬದುಕಿಸಿದ್ದಾನೆ. ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ. ಇಲ್ಲ ಅವನು ಇರುವ ಕಡೆ ನಾನೇ ಹೋಗುತ್ತೇನೆ. ನನಗೆ ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ. ನಾನು ಬರುತ್ತೇನೆ ಎಂದು ಭಾವನ್ಮಾಕವಾಗಿ ನುಡಿದಿದ್ದಾರೆ. ಈ ಮಾತುಗಳನ್ನು ಕೇಳಿ ಶಿವಣ್ಣ ದುಃಖ ತಡೆಯಲಾಗದೆ ಅಳುತ್ತಿದ್ದಾರೆ.ಜೇಮ್ಸ್ ತಂಡ ನೋಡಿದರೆ ನನಗೆ ಹೊಟ್ಟೆಕಿಚ್ಚಾಗುತ್ತೆ. ಅವನ ಕೊನೆ 3-4 ತಿಂಗಳು ಅವನ ಜೊತೆಯಲ್ಲೇ ಸಮಯ ಕಳೆದಿದ್ದೀರಿ. ನಾನು ಈ ಟೀಮ್ ನಲ್ಲಿಯೇ ಇದ್ದಿದ್ರೆ ಅವನ ಜೊತೆ ಕೆಲಸ ಮಾಡಬಹುದಿತ್ತು ಎಂದು ಅನಿಸುತ್ತೆ ಎಂದರು.ಅಭಿಮಾನಿಗಳ ಬಗ್ಗೆ ಮಾತನಾಡಿದ ಅವರು, ಈ ಸಿನಿಮಾವನ್ನು ಎಷ್ಟು ಪ್ರೀತಿಸಬೇಕೋ ಅದಕ್ಕಿಂತ ಹೆಚ್ಚು ಪ್ರೀತಿಸುತ್ತಿರುವಿರಿ. ನಿಮ್ಮೆಲ್ಲರಿಗೂ ಕೋಟಿ-ಕೋಟಿ ನಮಸ್ಕಾರ. ನಿಮ್ಮ ಜೊತೆಯಲ್ಲೇ ನಾನು ಸಿನಿಮಾವನ್ನು ನೋಡುತ್ತೇನೆ. ಕಣ್ಣು ತುಂಬುವವರೆಗೂ ನೋಡಿಕೊಳ್ಳುತ್ತೇನೆ. ಈವೆಂಟ್‍ನನ್ನು ಹಬ್ಬ ಮಾಡುವ ರೀತಿ ಮಾಡುತ್ತಿದ್ದಿರ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್ಜೇಮ್ಸ್ ತಂಡ ನೀವೇ ಪುಣ್ಯವಂತರು. ನನ್ನ ತಮ್ಮನ ಜೊತೆ ಕೊನೆ ದಿನಗಳಲ್ಲಿ ಹೆಚ್ಚು ಸಮಯ ಕಳೆದಿದ್ದೀರಿ. ಆದರೆ ಕೊನೆಯದಾಗಿ ನನ್ನ ಕೈಯಲ್ಲಿಯೂ ಒಂದು ಪಾತ್ರ ಮಾಡಿಸಿದ್ದೀರಾ. ತುಂಬಾ ಥ್ಯಾಂಕ್ಸ್ ಎಂದು ಹೇಳುತ್ತಾ ರಾಘಣ್ಣ ಭಾವುಕರಾದರು.Sign in to your account
Username or Email Address


Password

 Remember Me


