ರಾಮನಗರ: ಇವನಿಂದ ನಾನೇನು ಕಲಿಯಬೇಕಾಗಿಲ್ಲ. ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.ರಾಮನಗರದ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಲ್ ಟನ್‍ಗೆ 98 ಸಾವಿರ ಕೊಡಬೇಕು ಅಂತ ಹೇಳಿ 980 ಕೋಟಿ ದಂಡ ಹಾಕಿದ್ದು ಯಾರು? ನಾನು ರಾಮನಗರದಲ್ಲಿ ಇರುವುದು ಅನ್ಯಾಯದ ಬಗ್ಗೆ ಪ್ರಶ್ನಿಸುವುದಕ್ಕೆ. ಅನ್ಯಾಯವಾದಾಗ ಅನ್ಯಾಯ ಆಗಿದೆ ಎನ್ನುವುದು ತಪ್ಪೇ? ಯಾವುದೇ ವಿಷಯದಲ್ಲಿ ಅನ್ಯಾಯ ಆಗಿರಲಿ, ಅದನ್ನು ಜನತೆ ಮುಂದಿಡುವೆ. ಇಂತಹದನ್ನು ಜನತೆ ಮುಂದೆ ಇಡಲೆಂದೇ ನಾನಿರುವುದು. ಅವರಿಂದ ನಾನು ವಿಚಾರಗಳನ್ನು ಕಲಿಯಬೇಕಿಲ್ಲ. ಅವರಿಂದ ಯಾವ ವಿಷಯ ಎತ್ತಬೇಕು, ರೈತರ ವಿಷಯದಲ್ಲಿ ಏನು ಮಾತನಾಡಬೇಕು ಎಂದು ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋತರೂ ಸಿದ್ದರಾಮಯ್ಯಗೆ ಸೊಕ್ಕು ಇನ್ನೂ ಇಳಿದಿಲ್ಲ: ಈಶ್ವರಪ್ಪಕನಕಪುರದಲ್ಲಿ ಎಷ್ಟು ರೈತ ಕುಟುಂಬಗಳನ್ನು ಹಾಳು ಮಾಡಿದ್ದಾರೋ, ಹಣ ದಾಹಕ್ಕೆ ಜಮೀನು ಒಡೆದು ಬಂಡೆಗಳನ್ನು ಲೂಟಿ ಮಾಡಿದ್ದಾರೋ, ಬಂಡೆಗಳನ್ನು ವಿದೇಶಕ್ಕೆ ಸಾಗಿಸಿದಂತವರು ಇವರು, ಇವರಿಂದ ನಾನು ಬುದ್ಧಿ ಕಲಿಯಬೇಕೇ? ರೈತರ ಬಗ್ಗೆ ರೈತರ ಪರವಾಗಿ ಯಾವ ವಿಷಯ ಚರ್ಚೆ ಮಾಡಬೇಕು ಅಂತ ನೀರಾವರಿ ಬಗ್ಗೆ 3 ಗಂಟೆಗಳ ಕಾಲ ಚರ್ಚೆ ನಡೆಸಿದ್ದೇನೆ. ಎತ್ತಿನಹೊಳೆ ಪರಿಸ್ಥಿತಿ ಏನು, ಮೇಕೆದಾಟು ಪರಿಸ್ಥಿತಿ ಏನು, ಕೃಷ್ಣ ಮೇಲ್ದಂಡೆ ಪರಿಸ್ಥಿತಿ ಏನಾಗಿದೆ, ನವಿಲೆ ಡ್ಯಾಮ್ ಕಟ್ಟಲು ಯಾವ ಸಮಸ್ಯೆ ಆಗಿದೆ. ಇದೆಲ್ಲಾ ವಿಷಯ ಸುದೀರ್ಘವಾಗಿ ಸದನದಲ್ಲಿ ಚರ್ಚೆ ಮಾಡಿದ್ದೇದೆ. ಇವರ ಬಳಿ ಒಂದು ಸಬ್ಜೆಕ್ಟ್ ಮಾಹಿತಿ ಇಟ್ಟುಕೊಂಡಿದ್ದರೋ? ನೀರಾವರಿ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿವೆ. ಇದನ್ನು ಸದನದಲ್ಲಿ ಚರ್ಚೆ ನಡೆಸುವ ಸಂದರ್ಭದಲ್ಲೇ ಹೇಳಿದ್ದೇನೆ ಎಂದು ಹೇಳಿದ್ದಾರೆ.ಈಗಲ್ ಟನ್ ವಿಚಾರವಾಗಿ ಕೋರ್ಟ್ ಆದೇಶ ದಿಕ್ಕರಿಸಿದ್ದಾರೆ. ಇದರ ಬಗ್ಗೆ ನಾನು ಚರ್ಚೆ ಮಾಡಿದ್ದೇನೆ ಇದು ತಪ್ಪೇ? ಒಬ್ಬ ಜನ ಪ್ರತಿನಿಧಿಯಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ. ಯಾರಿಗೆ ಅನ್ಯಾಯವಾಗಲಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಜನಪ್ರತಿನಿಧಿಯ ಕರ್ತವ್ಯ. ಜನ ಪ್ರತಿನಿಧಿ ಕರ್ತವ್ಯ ಅಂದರೆ ಇವರಿಗೆ ಕಂಡವರ ಜಮೀನು ಲೂಟಿ ಹೊಡೆಯುವುದು, ಕಿಡ್ನಾಪ್ ಮಾಡಿಸುವುದು, ಮಕ್ಕಳನ್ನು ಹೆದರಿಸಿ ತಂದೆ ತಾಯಿ ಕೈಯಲ್ಲಿ ರುಜು ಹಾಕಿಸಿಕೊಳ್ಳುವುದು. ಇದು ಅವರ ಜೀವನ. ನಾನು ಈ ಜೀವನ ಮಾಡಿಲ್ಲ. ಇವನಿಂದ ನಾನೇನು ಕಲಿಯಬೇಕಾಗಿಲ್ಲ. ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತಿಲ್ವಾ.. ಯಾವ ರೀತಿ ದೇಶ ಲೂಟಿ ಹೊಡೆದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯಸರ್ಕಾರ ನಡೆಸುವವರಿಗೆ ಒಂದು ಸಹಿ ಹಾಕಬೇಕಾದರೆ ತಲೆಯಲ್ಲಿ ಬುದ್ಧಿ ಇರಬೇಕು. ಕಾಂಗ್ರೆಸ್ ಸರ್ಕಾರದಲ್ಲೇ ತಾನೇ ಈಗಲ್ ಟನ್ ವಿಚಾರ ಆಗಿರುವುದು. ಕೋರ್ಟ್ ಆದೇಶ ಧಿಕ್ಕರಿಸಿ ಈ ರೀತಿಯ ಆದೇಶ ಮಾಡಬೇಕೋ? ನಾಳೆ ಮತ್ತೆ ಸದನದಲ್ಲಿ ಮತ್ತಷ್ಟು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಇಂದು ಸಮುದಾಯ ಭವನ ಲೋಕಾರ್ಪಣೆ ಮಾಡಿದ ಅವರು, ಈ ಭಾಗದ ಹಲವು ಸಮುದಾಯದ ಜನರಿಗೆ ಅನುಕೂಲವಾಗುವ ಭವನ ನಿರ್ಮಿಸಿದ್ದಾರೆ. ಸ್ವಾಮೀಜಿ ಜನರ ಅನುಕೂಲಕ್ಕೆ ಭವನ ಕಟ್ಟಿಕೊಟ್ಟಿದ್ದಾರೆ. ಇಂದು ಈ ಸಮುದಾಯ ಭವನ ಲೋಕಾರ್ಪಣೆ ಮಾಡಿದ್ದೇನೆ. ಭವನ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಲೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


