ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರ ಪಂಡಿತರ ಮಾರಣಹೋಮ ಘಟನೆ ಕುರಿತಾದ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಪರ ಮತ್ತು ವಿರೋಧಗಳು ಕೇಳಿ ಬರುತ್ತಿವೆ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್ಒಂದು ಸಮುದಾಯದ ಓಲೈಕೆಗಾಗಿ ಮಾಡಿದ ಸಿನಿಮಾ ಇದು ಎಂದು ಕೆಲವರು ವಾದಿಸಿದರೆ, ಕಾಶ್ಮೀರಿ ಪಂಡಿತರ ವಸ್ತುಸ್ಥಿತಿಯ ಬಗ್ಗೆ ಮುಖಕ್ಕೆ ಹೊಡೆದಂತೆ ನಿರ್ದೇಶಕರು ಹೇಳಿದ್ದಾರೆ ಎನ್ನುವುದು ಮತ್ತೊಂದು ವಾದ. ಈ ವಾದ ವಿವಾದ ಏನೇ ಇರಲಿ, ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟ, ಪತ್ರಕರ್ತ ಪ್ರಕಾಶ್ ಬೆಳವಾಡಿ ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ತಾವು ಏಕೆ ನಟಿಸಲು ಒಪ್ಪಿಕೊಂಡೆ ಅನ್ನುವ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್“ಕಾಶ್ಮೀರಿ ಪಂಡಿತರ ಮಾರಣಹೋಮ ನಡೆದಾಗ ನಾನು ಪತ್ರಕರ್ತನಾಗಿದ್ದೆ. ಆ ಸಮಯದಲ್ಲಿ ನಿಜವಾಗಿಯೂ ಅಲ್ಲಿ ಏನು ನಡೆಯಿತು ಎಂದು ತಿಳಿದಿರಲಿಲ್ಲ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನನಗೆ ಸಿನಿಮಾದ ಚಿತ್ರಕಥೆ ಕಳುಹಿಸಿದಾಗ ಗಾಬರಿ ಆಯಿತು. ತಿಳಿದುಕೊಂಡಿರುವ ಇತಿಹಾಸವೇ ಬೇರೆ, ಆಗಿರುವ ಘಟನೆಯೇ ಬೇರೆಯಾಗಿತ್ತು. ಹಾಗಾಗಿ ನಾನು ಆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದಿದ್ದಾರೆ ಪ್ರಕಾಶ್ ಬೆಳವಾಡಿ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ“ಈ ಸಮಾಜದ ಪರವಾಗಿ ನಾನು ಕಾಶ್ಮೀರಿ ಪಂಡಿತರಿಗೆ ಕ್ಷಮೆ ಕೇಳಬೇಕು. ನಾನು ಅಪರಾಧಿ ಭಾವದಲ್ಲಿದ್ದೇನೆ. ಒಬ್ಬ ಪತ್ರಕರ್ತನಾಗಿಯೂ ನನಗೆ ನಿಜವಾದ ಇತಿಹಾಸವನ್ನು ಜನರಿಗೆ ತಿಳಿಸುವುದಕ್ಕೆ ಆಗಲಿಲ್ಲ. ಆ ಅಪರಾಧಿ ಭಾವದಿಂದಲೇ ಆ ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾದ ಮೂಲಕವಾದರೂ, ನನ್ನ ಅಪರಾಧಿ ಭಾವವನ್ನು ಕಡಿಮೆ ಮಾಡಿಕೊಳ್ಳುತ್ತೇನೆ’ ಎನ್ನುವುದು ಅವರ ಮಾತು. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣಈ ಸಿನಿಮಾದ ಮೂಲಕ 1990ರಲ್ಲಿ ನಡೆದ ಕ್ರೂರ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಹಲವು ವರ್ಷಗಳ ಕಾಲ ಘಟನೆಯ ಬಗ್ಗೆ ಸಂಶೋಧನೆ ಮಾಡಿ, ಸಂದರ್ಶಿಸಿ ಚಿತ್ರಕಥೆ ಹೆಣೆದಿದ್ದಾರಂತೆ. ಅನುಪಮ್ ಖೇರ್, ಪಲ್ಲವಿ ಜೋಸಿ, ಮಿಥುನ್ ಚಕ್ರವರ್ತಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್ಈ ಸಿನಿಮಾದ ಕುರಿತಂತೆ ಈಗಾಗಲೇ ಜಮ್ಮು ಕಾಶ್ಮೀರ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಗೌರವಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಪಾತ್ರ ತೋರಿಸಲಾಗಿದೆ ಎಂದು ರವಿ ಖನ್ನಾ ಪತ್ನಿ ದೂರು ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


