ತಮಿಳಿನಲ್ಲಿ ನಂಬರ್ ಒನ್ ನಟಿ ಸ್ಥಾನಕ್ಕೆ ಇಬ್ಬರು ನಾಯಕಿಯರ ಪೈಪೋಟಿ ನಡೆದಿದೆ. ಇಬ್ಬರೂ ಕನ್ನಡದ ಮೂಲದವರು ಎನ್ನುವುದು ವಿಶೇಷ. ಕಳೆದ ವರ್ಷ ಈ ಇಬ್ಬರೂ ನಟಿಯರ ಸಿನಿಮಾಗಳು ಸಮಗತಿಯಲ್ಲಿ ಸಾಗಿದ್ದವು. ತಲಾ ಐದೈದು ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆಗೆ ಇವರು ಪಾತ್ರರಾದರು. ಒಂದೇ ಸಮಯದಲ್ಲೇ ಇಬ್ಬರೂ ಸಂಭಾವನೆಯನ್ನೂ ಹೆಚ್ಚಿಸಿಕೊಂಡರು. ಬಾಲಿವುಡ್ ಗೂ ಹೋಗಿ ಬಂದರು. ಹೀಗಾಗಿ ಇಬ್ಬರ ಮಧ್ಯ ಭಾರೀ ಪೈಪೋಟಿ ಎದುರಾಗಿದೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್ಅಂದುಕೊಂಡಂತೆ ಆಗಿದ್ದರೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ  (‘ದಳಪತಿ 66’) ಪೂಜಾ ಹೆಗ್ಡೆ ನಾಯಕಿ ಎನ್ನಲಾಗಿತ್ತು. ಈ ಮಧ್ಯೆ ಕಿಯಾರಾ ಹೆಸರು ಕೇಳಿ ಬಂದಿತ್ತು. ಪೂಜಾ ಅಥವಾ ಕಿಯಾರಾ ಅವರೇ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎಂದು ತಮಿಳು ಚಿತ್ರರಂಗ ಹೇಳಿತ್ತು. ಆದರೆ, ಇದೀಗ ಚಿತ್ರಣವೇ ಬದಲಾಗಿದೆ. ಈ ಇಬ್ಬರೂ ನಾಯಕಿಯರು ಅವಕಾಶವಂಚಿತರಾಗಿ ಅವರ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!ಈವರೆಗೂ ತಮಿಳಿನ ಸ್ಟಾರ್ ಗಳ ಜತೆಯೇ ಹೆಚ್ಚಾಗಿ ನಟಿಸಿರುವ ರಶ್ಮಿಕಾ, ಈವರೆಗೂ ದಳಪತಿ ವಿಜಯ್ ಅವರ ಜತೆ ನಟಿಸಿರಲಿಲ್ಲ. ಇದೇ ಮೊದಲ ಬಾರಿಗೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ತಮಿಳಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ನಾಯಕಿಯ ಆಯ್ಕೆಯನ್ನು ಇನ್ನಷ್ಟ ಅಧಿಕೃತಗೊಳಿಸಬೇಕಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿಈಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ರಶ್ಮಿಕಾ, ಇದೀಗ ತಮ್ಮದೇ ಆದ ಯೂ ಟ್ಯೂಬ್ ಚಾನೆಲ್ ವೊಂದನ್ನು ಶುರು ಮಾಡಿದ್ದಾರೆ. ಮೊದಲ ದಿನವೇ ತಮ್ಮ ‘ಎಕ್ಸ್’ಗಳ ಬಗ್ಗೆ ಏನೂ ಕೇಳಬೇಡಿ ಎಂದು ವಾರ್ನ್ ಕೂಡ ಮಾಡಿದ್ದಾರೆ.Sign in to your account
Username or Email Address


Password

 Remember Me


