ಕಿರುತೆರೆಯಲ್ಲಿ ರವಿಚಂದ್ರನ್ ಎಂದೇ ಖ್ಯಾತರಾಗಿರುವ ರವಿಕಿರಣ್ ಅವರ ಪುತ್ರ ಪ್ರೇಮ್ ಕಿರಣ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಹೆಸರಾಂತ ನಿರ್ದೇಶಕರಾ ಆರ್.ಜಿವಿ ಮತ್ತು ಪೂರಿ ಜಗನ್ನಾಥ್ ಗರಡಿಯಲ್ಲಿ ಪಳಗಿರುವ ರವಿವರ್ಮಾ ನಿರ್ದೇಶನದ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಂದು ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು, ಈ ಚಿತ್ರಕ್ಕೆ ಸ್ವತಃ ರವಿಕಿರಣ್ ಅವರೇ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣಚಿತ್ರಕ್ಕೆ ಟಾರ್ಗೆಟ್ ಎಂದು ಹೆಸರಿಡಲಾಗಿದ್ದು, ಇವತ್ತಿನ ಯುವ ಸಮುದಾಯದ ಸುತ್ತ ಹೆಣೆದಿರುವ ಕಥೆ ಚಿತ್ರದಲ್ಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣವಾಗಲಿದೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್ಪ್ರೇಮ್ ಕಿರಣ್ ಜತೆ ವಿಜಯ್ ಕಾರ್ತಿಕ್ ಹಾಗೂ ಸಚಿನ್ ಪುರೋಹಿತ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಮೇಘಶ್ರೀ ಹಾಗೂ ಸಹರ್ ಕೃಷ್ಣನ್ ನಾಯಕಿಯರು. ನಿರ್ದೇಶಕರ ಚೊಚ್ಚಲು ಸಿನಿಮಾ ಇದಾಗಿದ್ದರೂ, ಈಗಾಗಲೇ ಅವರು ಹಲವು ವೆಬ್ ಸೀರಿಸ್ ಗಳಿಗೂ ನಿರ್ದೇಶನ ಮಾಡಿದ ಅನುಭವವಿದೆ. ಈ ಕುರಿತು ಮಾತನಾಡಿದ ನಿರ್ದೇಶಕರು, “ಈಗ ಕೈಗೆತ್ತಿಕೊಂಡಿರುವ ಕಾನ್ಸೆಪ್ಟ್ ಇದುವರೆಗೆ ಬಂದಿಲ್ಲವೆಂದೇ ಹೇಳಬಹುದು, ಈಗಿನ ಜನರೇಷನ್ ಯಾವ ರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಹೇಗೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ, ಹೆಣ್ಣಿನ ಮೇಲೆ ಚಿಕ್ಕ ವಯಸಿನಲ್ಲಿ ನಡೆದ ಶೋಷಣೆ ಮುಂದೆ ಯಾವರೀತಿ ಪ್ರಭಾವ ಬೀರುತ್ತದೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ಸ್ಟೋರಿ, ಮರ್ಡರ್ ಮಿಸ್ಟರಿ ಕೂಡ ಟಾರ್ಗೆಟ್ ಚಿತ್ರದಲ್ಲಿದೆ” ಎಂದರು.Sign in to your account
Username or Email Address


Password

 Remember Me


