ಬೆಂಗಳೂರು: ಸಿಲಿಕಾನ್ ಸಿಟಿಯ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಆವರಣದಲ್ಲಿರುವ ಎಂ.ಎಸ್.ರಾಮಯ್ಯ ರೋಟರಿ ಕೃತಕ ಕೈಕಾಲು ಜೋಡಣಾ ಕೇಂದ್ರದಲ್ಲಿ  ತ್ರಿಡಿ ಪ್ರಿಂಟಿಂಗ್ ಕೃತಕ ಕೈ, ಕಾಲು ಜೋಡಣಾ ಘಟಕವನ್ನು ಉದ್ಘಾಟಿಸಲಾಯಿತು.ಈ ಕೃತಕ ಕೈ, ಕಾಲು ಜೋಡಣಾ ಘಟಕವನ್ನು ರೋಟರಿ ಡಿಸ್ಟ್ರಿಕ್ಟ್ ಗವರ್ನರ್, 3190 ರೋ. ಫಜಲ್ ಮಹಮ್ಮದ್ ಉದ್ಟಾಟಿಸಿದರು. ಈ ಒಂದು ತಂತ್ರಜ್ಞಾನದಿಂದ ಅತೀ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಕೈ ಕಾಲಿನ ತದ್ರೂಪದಂತೆ ಕೃತಕ ಅಂಗವನ್ನು ಜೋಡಿಸಬಹುದಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?ಇದರಿಂದ ರೋಗಿಗಳು ಸಾಕಷ್ಟು ಸಮಯ ಕಾಯುವುದು ತಪ್ಪುವುದಲ್ಲದೇ ಶೀಘ್ರವೇ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ. ಕೈ, ಕಾಲು ಮಾತ್ರವಲ್ಲದೇ ದೇಹದ ಯಾವುದೇ ಅಂಗವನ್ನು ಕಡಿಮೆ ಅವಧಿಯಲ್ಲಿ ತಯಾರು ಮಾಡಬಹುದು. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧಈ ಸಂದರ್ಭದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಆರ್.ಜಯರಾಂ, ಡಾ. ಸವಿತಾ ರವೀಂದ್ರ, ಡಾ. ಗುರುದೇವ್ ಮುಂತಾದವರು ಉಪಸ್ಥಿತರಿದ್ದರು.Sign in to your account
Username or Email Address


Password

 Remember Me


