ತಮಗೆ ಸಿನಿಮಾ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಎಂದುಕೊಂಡೆ ಹೆಸರಾಂತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯನ್ನು ಮದುವೆಯಾದರು ಅನುಷ್ಕಾ ಶರ್ಮಾ. ಆ ನಂತರದ ದಿನಗಳಲ್ಲಿ ಅವರು ಹೆಚ್ಚೆಚ್ಚು ಕ್ರಿಕೆಟ್ ಪಂದ್ಯಗಳ ಗ್ಯಾಲರಿಯಲ್ಲಿ ಕಾಣಿಸಿಕೊಂಡರು. ಇದೀಗ ಕ್ರಿಕೆಟ್ ತಾರೆಯ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಪಾತ್ರಕ್ಕಾಗಿ ಅವರು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಬದುಕನ್ನು ಆಧರಿಸಿದ ‘ಚಕ್ಡಾ ಎಕ್ಸ್ ಪ್ರೆಸ್’ ಸಿನಿಮಾದಲ್ಲಿ ಅನುಷ್ಕಾ ಅವರು ಜೂಲನ್ ಪಾತ್ರ ಮಾಡುತ್ತಿದ್ದಾರೆ. ಉತ್ತಮ ಬೌಲರ್ ಆಗಿರುವ ಜೂಲನ್ ಹೇಗೆಲ್ಲ ಕ್ರಿಕೆಟ್ ಆಡುತ್ತಿದ್ದರು ಎನ್ನುವುದನ್ನು ಸಮೀಪದಿಂದ ಗಮನಿಸಿ, ಇದೀಗ ಬೌಲಿಂಗ್ ಪ್ರಾಕ್ಟಿಸ್ ಕೂಡ ಮಾಡುತ್ತಿದ್ದಾರೆ. ಆ ವಿಡಿಯೋವನ್ನು ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಹಾಕಿದ್ದಾರೆ. ನೆಟ್ಸ್ ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಅನುಷ್ಕಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿನಾಲ್ಕು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದ ಅನುಷ್ಕಾ 2018ರಲ್ಲಿ ತೆರೆಕಂಡ ಝೀರೋ ಚಿತ್ರದಲ್ಲಿ ನಟಿಸಿದ್ದರೆ, ಆನಂತರ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹಾಗಾಗಿಯೇ ಸಖತ್ ತಾಲೀಮು ಮಾಡಿಕೊಂಡೆ ಕ್ಯಾಮೆರಾ ಮುಂದೆ ನಿಲ್ಲುವ ಸಂಕಲ್ಪ ಮಾಡಿದ್ದಾರಂತೆ ಅನುಷ್ಕಾ.Sign in to your account
Username or Email Address


Password

 Remember Me


