ಪ್ಯಾರ್ಗೆ ಆಗ್ಬಿಟ್ಟೈತಿ ಹುಡುಗಿ ಪಾರುಲ್ ಯಾದವ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸದ್ಯ ಅವರು ಏಕಾಂಗಿಯಾಗಿ ಪ್ರವಾಸ ಮಾಡುತ್ತಿದ್ದಾರೆ. ಸೋಲೋ ಟ್ರಿಪ್ ಮಾಡುವ ಮಜವೆ ಬೇರೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿಗೋವಿಂದಾಯನಮಃ ಸಿನಿಮಾದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಪಡೆದ ಪಾರುಲ್, ಆನಂತರ ಹಲವು ಚಿತ್ರಗಳಲ್ಲಿ ನಟಿಸಿದರು. ಮೂರ್ನಾಲ್ಕು ವರ್ಷಗಳಿಂದ ಅವರು ಸಿನಿಮಾ ರಂಗದಲ್ಲಿ ಸಕ್ರೀಯರಾಗಲಿಲ್ಲ. ಕಾರಣ ಬಟರ್ ಪ್ಲೈ ಸಿನಿಮಾ ಎನ್ನಲಾಗುತ್ತಿದೆ. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದಬಾಲಿವುಡ್ ನಲ್ಲಿ ತೆರೆಕಂಡ ಕ್ವೀನ್ ಸಿನಿಮಾದ ಕನ್ನಡದ ಅವತರಣಿಕೆ ಈ ‘ಬಟರ್ ಪ್ಲೈ’ .  ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ರಮೇಶ್ ಅರವಿಂದ್. ಶೂಟಿಂಗ್ ಮುಗಿದು, ಬಿಡುಗಡೆ ಆಗಬೇಕಿದ್ದ ಚಿತ್ರ ಹಾಗೆಯೇ ಉಳಿದುಕೊಂಡಿತು. ಅದಕ್ಕೆ ಕಾರಣವೂ ಸಿಕ್ಕಿವಲ್ಲವಂತೆ. ಅಲ್ಲದೇ, ಈ ಸಿನಿಮಾದಲ್ಲಿ ಸ್ವತಃ ಪಾರುಲ್ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಸಹ ನಿರ್ಮಾಪಕಿ ಕೂಡ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರುಸಿನಿಮಾದಿಂದ ದೂರವಾಗಿ ಈಗ ಸೋಲೊ ಟ್ರಿಪ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರಂತೆ ಪಾರೂಲ್. ಹೀಗೆ ಒಂಟಿಯಾಗಿ ಪ್ರವಾಸ ಮಾಡುವುದೇ ಒಂದು ರೀತಿಯಲ್ಲಿ ರೋಚನ ಅಂದಿದ್ದಾರೆ ಬಟರ್ ಫ್ಲೈ ಬೆಡಗಿ.Sign in to your account
Username or Email Address


Password

 Remember Me


