ಕೌಟುಂಬಿಕ ಕಾರಣಗಳಿಂದಾಗಿಯೇ ಹೆಚ್ಚು ಸುದ್ದಿ ಆಗುತ್ತಿರುವ ಸಮಂತಾ, ಇದೀಗ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಖತ್ ಟ್ರೋಲ್ ಆಗಿದ್ದಾರೆ. ಕಿಕ್ ಏರಿಸಲು ಹೊರಟಿದ್ದ ಈ ಮಿಲ್ಕಿ ಬ್ಯೂಟಿಗೆ ‘ಹಾಗೆಲ್ಲ ಮಾಡ್ಬೇಡಿ’ ಎಂದು ಅಭಿಮಾನಿಗಳು ಬುದ್ದಿ ಹೇಳಿದ್ದಾರೆ. ‘ನೀವು ಅಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದು ನಮಗೆ ಇಷ್ಟವಿಲ್ಲ’ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿಸಮಂತಾ ಇತ್ತೀಚೆಗೆ ಆಲ್ಕೋಹಾಲ್ ಕಂಪೆನಿಯೊಂದರ ಜಾಹೀರಾತಿನಲ್ಲಿ ನಟಿಸಿದ್ದಾರೆ. ಆ ವಿಡಿಯೋದಲ್ಲಿ ಅವರು ಎರಡು ಬಗೆಯ ಕಾಸ್ಟ್ಯೂಮ್ ಧರಿಸಿದ್ದಾರೆ. ಅವೆರಡೂ ಸಮಂತಾಗೆ ಒಪ್ಪಿಲ್ಲವಂತೆ. ಹಾಗಾಗಿ ‘ಇಂತಹ ಅರೆಬರೆ ಕಾಸ್ಟ್ಯೂಮ್ ಗಳಲ್ಲಿ ಕಾಣಿಸಿಕೊಳ್ಳಬೇಡಿ. ಆ ರೀತಿಯಲ್ಲಿ ನಿಮ್ಮನ್ನು ನಾವು ನೋಡಲು ಸಾಧ್ಯವಿಲ್ಲ’ ಎಂದು ಅಭಿಮಾನಿಗಳು ಕೂಡ ಗರಂ ಆಗಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆಪುಷ್ಟಾ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿನಲ್ಲೂ ಸಮಂತಾ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದರು. ಈ ಸಮಯದಲ್ಲೂ ಕೆಲವರಿಂದ ಟೀಕೆ ವ್ಯಕ್ತವಾಗಿತ್ತು. ಇಂತಹ ಹಾಡಿನಲ್ಲಿ ನೀವು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ನಮಗಿಷ್ಟವಿಲ್ಲ ಎಂದು ಅಭಿಮಾನಿಗಳು ನೇರವಾಗಿಯೇ ಹೇಳಿದ್ದರು. ಅಲ್ಲದೇ, ಆ ಹಾಡಿನ ಸಾಲಿನ ಕುರಿತೂ ಆಕ್ಷೇಪ ವ್ಯಕ್ತವಾಗಿತ್ತು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮಇದೀಗ ಜಾಹೀರಾತಿನ ಬಗ್ಗೆ ಟ್ರೋಲಿಗರು ನಾನಾ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ. ತಣ್ಣಗೆ ನಕ್ಕು ಸಮಂತಾ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.Sign in to your account
Username or Email Address


Password

 Remember Me


