ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ, ಮಲಯಾಳಿ ನಟಿ ಭಾವನಾ ಮೆನನ್ ಮೇಲಿನ ದೌರ್ಜನ್ಯ ಖಂಡಿಸಿರುವ ಸಾಲಿನಲ್ಲಿ ನಟ ಸೂರ್ಯ ಇದೀಗ ಸೇರ್ಪಡೆಗೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಎತುರ್ಕುಂ ತೂನಿಂದವನ್’ ಸಿನಿಮಾದ ಪ್ರಚಾರಕ್ಕಾಗಿ ಕೊಚ್ಚಿಗೆ ತೆರಳಿದ್ದ ಸೂರ್ಯ, ಕೇರಳದಲ್ಲಿ ನಡೆದ ನಟಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಯಾವ ನಾಗರೀಕ ಸಮಾಜ ಒಪ್ಪಿಕೊಳ್ಳುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆ ನಟಿಯೊಂದಿಗೆ ನಾವೆಲ್ಲರೂ ಇದ್ದೇವೆ. ಅವರು ಧೈರ್ಯದಿಂದ ಜೀವನ ನಡೆಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡನಟಿ ಭಾವನಾ ಮೇಲೆ 2017ರಲ್ಲಿ ಕೇರಳದಲ್ಲಿ ಹಲ್ಲೆ ನಡೆಯಿತು. ಪ್ರಭಾವಿ ನಟರೊಬ್ಬರು ಇದರ ಹಿಂದೆ ಇದ್ದಾರೆ ಎಂದು ಸ್ಟಾರ್ ನಟ ದಿಲೀಪ್ ಮೇಲೆ  ಆರೋಪ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಅವರ ಬಂಧನ ಕೂಡ ಆಗಿತ್ತು. ಈಗವರು ಜಾಮೀನನ ಮೇಲೆ ಆಚೆ ಬಂದಿದ್ದಾರೆ. ಈ ಪ್ರಕರಣ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡಇತ್ತೀಚೆಗಷ್ಟೇ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಬಹಿರಂಗವಾಗಿ ಭಾವನಾ ಮಾತನಾಡಿದ್ದರು. ಅದೊಂದು ನಕರದ ಸನ್ನಿವೇಶವೆಂದು ಹೇಳಿಕೊಂಡಿದ್ದರು. ಅಂತಹ ಘಟನೆ ನನ್ನ ಜೀವನದಲ್ಲಿ ನಡೆಯಿತಲ್ಲ ಎಂದು ಮಾನಸಿಕವಾಗಿ ಕುಸಿದು ಹೋಗಿದ್ದೆ ಎಂದೂ ಅವರು ನೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋಈ ಎಲ್ಲವನ್ನೂ ಮರೆತು ಮತ್ತೆ ಸಹಜ ಜೀವನಕ್ಕೆ ಬರಲು ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದ ಭಾವನಾ ಇತ್ತೀಚೆಗಷ್ಟೇ ಬಿಡುಗಡೆಯಾದ ಭಜರಂಗಿ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾದಲ್ಲಿಯ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಇದೀಗ ಮತ್ತೆ ನಟನೆಯಲ್ಲಿ ಭಾವನಾ ಸಕ್ರೀಯರಾಗಿದ್ದಾರೆ.Sign in to your account
Username or Email Address


Password

 Remember Me


