ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಎಕ್ಸಿಟ್ ಪೋಲ್‍ನ ಸಮೀಕ್ಷೆ ಪ್ರಕಾರವೇ ಫಲಿತಾಂಶ ಬರುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜ್ಞಾನೋದಯ ಮಾಡಿಕೊಳ್ಳುವ ಫಲಿತಾಂಶ ಇದಾಗಿದೆ. ಬಿಜೆಪಿ ಫೈಟ್ ಕೊಡಲು ಜೆಡಿಎಸ್ ಸೂಕ್ತ ಎಂಬುದು ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ಈ ಚುನಾವಣಾ ಫಲಿತಾಂಶ, ಜೆಡಿಎಸ್ ಮುಗಿಸಲು ಹೋದವರಿಗೆ ಪಾಠ ಕಲಿಸಿದಂತಾಗಿದೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದೇ ಬಿಟ್ಟೋ ಎಂತಿದ್ದವರಿಗೆ ಪಾಠ ಕಲಿಸಿದ ಫಲಿತಾಂಶ ಇದಾಗಿದೆ. ನೀರಾವರಿ ವಿಚಾರಗಳನ್ನ ಇಟ್ಕೊಂಡು ಹೋರಾಟ ಮಾಡುತ್ತೇವೆ. 5 ರಾಜ್ಯಗಳ ಪರಿಸ್ಥಿತಿ ಬೇರೆ, ನಮ್ಮ ರಾಜ್ಯಗಳ ಪರಿಸ್ಥಿತಿ ಬೇರೆಯಾಗಿದೆ. ಕಾಂಗ್ರೆಸ್‍ನವರು ಗೋವಾ, ಉತ್ತರಾಖಂಡ್ ಸರ್ಕಾರ ರಚನೆಗೆ ರಾಜ್ಯದ ಸೂತ್ರಧಾರರನ್ನ ಕರೆಸಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಗೋವಾ ಚುನಾವಣಾ ಫಲಿತಾಂಶ ನಮಗೆ ಸ್ಫೂರ್ತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಿ – ಕಾಂಗ್ರೆಸ್‍ಗೆ ಆರ್.ಅಶೋಕ್ ಸಲಹೆದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ ಎಂದು ಕಂಡುಬರುತ್ತಿದೆ. ರಾಜ್ಯದಲ್ಲಿ ನೀರಾವರಿ ಸಮಸ್ಯಗಳಿವೆ ಮುಂದಿನ ಒಂದು ವರ್ಷ ನೀರಾವರಿಗಾಗಿ ಕಾರ್ಯಕ್ರಮ ಮಾಡ್ತಾಯಿದ್ದೇವೆ. ಪಂಜಾಬ್, ಪಶ್ಚಿಮ ಬಂಗಾಳದ ರಿಸಲ್ಟ್ ನಮಗೆ ಸ್ಫೂರ್ತಿಯಾಗಿದೆ. ಐದು ರಾಜ್ಯಗಳ ಫಲಿತಾಂಶವೇ ಬೇರೆಯಾಗಿದೆ. ಅಲ್ಲಿನ ಪರಿಸ್ಥಿತಿಗಳೇ ಬೇರೆ, ನಮ್ಮ ರಾಜ್ಯದ ಪರಿಸ್ಥಿತಿನೇ ಬೇರೆಯಾಗಿದೆ. ಒಂದು ವರ್ಷ ಇದೆ, ನೋಡೋಣ ಏನೆಲ್ಲಾ ಆಗುತ್ತೆ ಎಂದರು. ಇದನ್ನೂ ಓದಿ:  ಗೋವಾ ಚುನಾವಣಾ ಫಲಿತಾಂಶ: ಬಿಜೆಪಿ, ಕಾಂಗ್ರೆಸ್‌ ಮಧ್ಯೆ ಹಾವು ಏಣಿ ಆಟಗೋವಾ, ಪಂಜಾಬ್ ನಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಅಂತ ಹೇಳ್ತಾಯಿದ್ದರು, ಕರ್ನಾಟಕದಿಂದ ಸೂತ್ರಧಾರರನ್ನ ಗೋವಾಗೆ ಕಳುಹಿಸಿಲ್ವಾ ಶಾಸಕರ ರಕ್ಷಣೆಗೆ ಇಲ್ಲಿಂದ ಕಳುಹಿಸಿಲ್ವಾ ಎಂದು ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್ ಡಿಕೆ ಟಾಂಗ್‍ಕೊಟ್ಟಿದ್ದಾರೆ.Sign in to your account
Username or Email Address


Password

 Remember Me


