ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಪ್ರೀ ರಿಲೀಸ್ ಕನ್ನಡ ಇವೆಂಟ್ ಬೆಂಗಳೂರಿನಲ್ಲಿ ಮಾಡುವುದಾಗಿ ಈ ಹಿಂದೆ ಘೋಷಣೆ ಆಗಿತ್ತು. ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಇವೆಂಟ್ ಮಾಡುವ ಕುರಿತು ಚಿತ್ರತಂಡವೇ ಹೇಳಿತ್ತು. ಕೋವಿಡ್ ನಿಯಮ ಪಾಲನೆಯ ಕಾರಣದಿಂದಾಗಿ ಕಾರ್ಯಕ್ರಮ ಆಗಲಿಲ್ಲ. ಇದೀಗ ಅದೇ ಇವೆಂಟ್ ಬೆಂಗಳೂರಿನಿಂದ ಶಿಫ್ಟ್ ಆಗಿದೆ. ಮಾರ್ಚ್ 19ರಂದು ಸಿನಿಮಾದ ಪ್ರೀ ರಿಲೀಸ್ ಕನ್ನಡ ಇವೆಂಡ್ ಆಂಧ್ರದ ಗಡಿಭಾಗವಾದ ಚಿಕ್ಕ ಬಳ್ಳಾಪುರದಲ್ಲಿ ನಡೆಯಲಿದೆ. ಇದನ್ನೂ ಓದಿ : ದೌರ್ಜನ್ಯ ಖಂಡಿಸಿ, ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯಬೆಂಗಳೂರಿನಲ್ಲಿ ಮಾಡಲು ಹೊರಟಿದ್ದ ಇವೆಂಟ್ ಅಲ್ಲಿಗೆ ಶಿಫ್ಟ್ ಆಗಲು ಕಾರಣ ಟ್ರಾಫಿಕ್ ಜಾಮ್ ಎನ್ನುತ್ತಿದೆ ಚಿತ್ರತಂಡ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ಹೋದರೆ, ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ತೊಂದರೆ ಆಗುತ್ತದೆ. ಹಾಗಾಗಿ ಚಿಕ್ಕ ಬಳ್ಳಾಪುರದಲ್ಲಿ ಮಾಡಲು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡಕನ್ನಡ ಮತ್ತು ತೆಲುಗಿನ ಖ್ಯಾತ ಗಣ್ಯರೆಲ್ಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯ ಅತಿಥಿಯಾಗಿ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆಯಂತೆ. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡನಾನಾ ಕಾರಣಗಳಿಂದಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೇ ಮೊದಲ ಬಾರಿಗೆ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಜೊತೆಯಾಗಿ ನಟಿಸಿದ್ದಾರೆ. ಇಬ್ಬರ ಫ್ಯಾನ್ಸ್ ಮಧ್ಯ ಆಗಾಗ್ಗೆ ಸ್ಟಾರ್ ವಾರ್ ನಡೆಯುತ್ತಿತ್ತು. ಹೀಗಾಗಿ ಇಬ್ಬರೂ ಅಭಿಮಾನಿಗಳು ಒಟ್ಟಿಗೆ ಸಿನಿಮಾ ನೋಡುವುದು ಇದೊಂದು ಸಿನಿಮಾದ ಐತಿಹಾಸಿಕ ದಾಖಲೆ ಎಂದು ಬಣ್ಣಿಸಲಾಗುತ್ತಿದೆ.Sign in to your account
Username or Email Address


Password

 Remember Me


