ಧಾರವಾಡ: ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ಧಾರವಾಡ ನಗರದ ಪೆಂಡಾರ್ ಗಲ್ಲಿಯಲ್ಲಿ ನಡೆದಿದೆ.ಪೆಂಡಾರ್ ಗಲ್ಲಿಯ ಹಾಲ್‍ನಲ್ಲಿ ಮದುವೆ ಸಮಾರಂಭವೊಂದಕ್ಕೆ ಹೋದ ಧಾರವಾಡ ನಗರದ ಜಾಂಬವಂತನಗರ ನಿವಾಸಿ ಸಾದಿಕ್, ಇಬ್ಬರ ಮಧ್ಯೆ ಜಗಳ ನಡೆಯುತ್ತಿರುವುದನ್ನು ಬಿಡಿಸಲು ಹೋಗಿದ್ದನು. ಈ ವೇಳೆ ತಳ್ಳಾಟ, ನೂಕಾಟದಲ್ಲಿ ಸಿಲುಕಿದ್ದರಿಂದ ಸಾಧಿಕ್ ತಲೆಗೆ ಗೇಟ್ ಬಡಿದು ಗಂಭೀರ ಗಾಯಗೊಂಡಿದ್ದಾನೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಅತ್ಯಾಚಾರಕ್ಕೆ ಯತ್ನ – ಬಿಹಾರ ಕ್ರಿಕೆಟ್ ಮುಖ್ಯಸ್ಥನ ವಿರುದ್ಧ ಆರೋಪ ತಕ್ಷಣ ಸ್ಥಳದಲ್ಲಿದ್ದ ಜನರು ಆತನನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾಧಿಕ್ ಸಾವನ್ನಪ್ಪಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.ರಿಜ್ವಾನ್, ಸಾಧಿಕ್‍ನನ್ನು ತಳ್ಳಿದ್ದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಆರೋಪಿ ರಿಜ್ವಾನ್‍ನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.Sign in to your account
Username or Email Address


Password

 Remember Me


