ಭಾರತೀಯ ಸಿನಿಮಾ ರಂಗದ ದಂತಕಥೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಹಾಗೂ ರಜನಿಕಾಂತ್ ಅವರಿಗಾಗಿ ಮೊದಲ ಫ್ಯಾನ್ಸ್ ಕ್ಲಬ್ ತಗೆದಿದ್ದ ಮದುರೈ ಮೂಲದ ಮುತ್ತುಮಣಿ ಇಂದು ನಿಧನರಾಗಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿರಜನಿಕಾಂತ್ ಅವರು ಇನ್ನೂ ಹೀರೋ ಆಗಿ ಲಾಂಚ್ ಆಗದೇ ಇರುವ ವೇಳೆಯಲ್ಲಿ ಅಂದರೆ, ಖಳನಟನಾಗಿ ತೆರೆಯ ಮೇಲೆ ಮಿಂಚುತ್ತಿರುವ ಹೊತ್ತಿನಲ್ಲಿಯೇ ಮುತ್ತುಮಣಿ 45 ವರ್ಷಗಳ ಹಿಂದೆ ರಜನಿಕಾಂತ್ ಅಭಿಮಾನಿ ಸಂಘ ಶುರು ಮಾಡಿದ್ದರು. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’ಮುತ್ತುಮಣಿ ಕಂಡರೆ ರಜನಿಗೆ ಎಲ್ಲಿಲ್ಲದ ಪ್ರೀತಿ. ಇವರು ಅನಾರೋಗ್ಯಕ್ಕೆ ತುತ್ತಾದಾಗ ಸ್ವತಃ ರಜನಿ ಅವರೇ ಸಹಾಯ ಮಾಡಿದ್ದರು. ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಅಲ್ಲದೇ, ರಜನಿ ನಟನೆಯ ಅಂಬುಲ್ಲ ರಜನಿಕಾಂತ್ ಸಿನಿಮಾದಲ್ಲಿ ‘ಮುತ್ತುಮಣಿ ಚೌದರೆ ವಾ’ ಹಾಡಿನಲ್ಲಿ ವಿಶೇಷವಾಗಿ ಮುತ್ತಮಣಿಯನ್ನು ಸ್ಮರಿಸಿದ್ದರು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್ರಜನಿಕಾಂತ್ ಅಭಿಮಾನಿಗಳ ಸಂಘದ ಹುಟ್ಟಿಗೆ ಕಾರಣರಾಗಿದ್ದ ಮುತ್ತುಮಣಿ ನಿಧನಕ್ಕೆ ರಜನಿ ಫ್ಯಾನ್ಸ್ ಮತ್ತು ರಜನಿಕಾಂತ್ ಕಂಬನಿ ಮಿಡಿದ್ದಾರೆ.Sign in to your account
Username or Email Address


Password

 Remember Me


