ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇಂದು ಕೇವಲ 197 ಮಂದಿಯಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ. ಹಾಗೆಯೇ 8 ಮಂದಿ ಕೊರೊನಾದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.ಇಂದು 258 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಇದುವರೆಗೆ 38,99,905 ಮಂದಿ ಕೋವಿಡ್ 19 ನಿಂದ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,980 ಇದೆ. ರಾಜ್ಯದಲ್ಲಿ ಇದುವರೆಗೆ 40004 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಮರಣ ಪ್ರಮಾಣ 4.06% ಇದೆ. ಇದನ್ನೂ ಓದಿ: ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 130, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 0, ಚಿತ್ರದುರ್ಗ 7, ದಕ್ಷಿಣ ಕನ್ನಡ 3, ದಾವಣಗೆರೆ 2, ಧಾರವಾಡ 0, ಗದಗ 6, ಹಾಸನ 2, ಹಾವೇರಿ 0, ಕಲಬುರಗಿ 1, ಕೊಡಗು 1, ಕೋಲಾರ 1, ಕೊಪ್ಪಳ 1, ಮಂಡ್ಯ 2, ಮೈಸೂರು 9, ರಾಯಚೂರು 1,ರಾಮನಗರ 0, ಶಿವಮೊಗ್ಗ 4, ತುಮಕೂರು 9, ಉಡುಪಿ 2, ಉತ್ತರ ಕನ್ನಡ 2, ವಿಜಯಪುರ 0, ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿದೆ.ಇಂದಿನ 08/03/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/gaVOFFngoL @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/0xbEc38XVt— K'taka Health Dept (@DHFWKA) March 8, 2022Sign in to your account
Username or Email Address


Password

 Remember Me


