ಬೆಂಗಳೂರು: ಯೂಟರ್ನ್ ತೆಗೆದುಕೊಳ್ಳುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕೆರೆಕತ್ತಿಗನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದ ರಾಮಯ್ಯ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡಅಪಘಾತದಿಂದಾಗಿ ಹೈವೆಯಲ್ಲಿ ಟ್ರಾಫಿಕ್ ಜಾಂ ಉಂಟಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರಕ್ಕೆ ಅನುವು ಮಾಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನಈ ಅಪಘಾತದ ದೃಶ್ಯ ಕೂಡ ಸ್ಥಳೀಯ ಹೋಟೆಲ್‍ನ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂಡಲೇ ರಸ್ತೆ ಅಗಲೀಕರಣ ಮಾಡಬೇಕು, ಸರ್ವೀಸ್ ರಸ್ತೆ ನಿರ್ಮಿಸುವುದರ ಜೊತೆ ಅಪಘಾತ ವಲಯದ ಮಾರ್ಗಸೂಚಿಗಳ ಹಾಕುವಂತೆ ಕೆರೆಕತ್ತಿಗನೂರು, ಹನುಮಂತಪುರ, ಗುಂಡೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.Sign in to your account
Username or Email Address


Password

 Remember Me


