ಪುನೀತ್ ರಾಜ್ ಕುಮಾರ್ ನಿಧನಕ್ಕೂ ಮುನ್ನ ಏನೆಲ್ಲ ಕೆಲಸ ಮಾಡಿ ಹೋದರು ಎನ್ನುವುದು ಒಂದೊಂದೆ ಬೆಳಕಿಗೆ ಬರುತ್ತಿದೆ. ಗುರುರಾಜ್ ಜ್ಯೇಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ ಹರೀಶ್ ವಯಸ್ಸು 36 ಚಿತ್ರಕ್ಕಾಗಿ ಅವರು ಟೈಟಲ್ ಸಾಂಗ್ ಹಾಡಿದ್ದಾರೆ. ಇದೇ ಮೊದಲ ಬಾರಿಗೆ ಸಂಪೂರ್ಣ ಹಾಸ್ಯ ಚಿತ್ರಕ್ಕಾಗಿ ಪುನೀತ್ ಹಾಡಿದ್ದು ಎನ್ನುವುದು ವಿಶೇಷ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್ಇದೊಂದು ಹಾಸ್ಯ ಪ್ರಧಾನ ಸಿನಿಮಾವಾದರೂ, ಹಾಡುಗಳಿಗೂ ಅಷ್ಟೇ ಮಹತ್ವ ನೀಡಿದ್ದಾರಂತೆ ನಿರ್ದೇಶಕರು. ಹಾಗಾಗಿ ಪುನೀತ್ ಅವರು ಒಂದು ಗೀತೆ ಹಾಡಿದ್ದರೆ, ನಿರ್ಮಾಪಕ ಲಕ್ಷ್ಮಿಕಾಂತ್ ಕೂಡ ಮತ್ತೊಂದು ಪ್ರೇಮಗೀತೆ ಹಾಡಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್ಚಿತ್ರದ ಮತ್ತೊಂದು ವಿಶೇಷ ಅಂದರೆ, ಈ ಹಿಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದ ಯೋಗೀಶ್ ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. 36ರ ವಯಸ್ಸಿನ ಹರೀಶ್ ಮದುವೆಯಾಗಲು ಹೊರಟಾಗ ಏನೆಲ್ಲ ಪ್ರಸಂಗಗಳು ನಡೆಯುತ್ತವೆ ಎನ್ನುವುದು ಚಿತ್ರದ ಕಥಾವಸ್ತು.  ಹಿರಿಯ ನಟರಾದ ಉಮೇಶ್, ಶ್ವೇತಾ ಅರೆಹೊಳೆ, ದೀಪಿಕಾ ರಾವ್ ಸೇರಿದಂತೆ ಅನುಭವಿ ಚಿತ್ರತಂಡವೇ ಸಿನಿಮಾದಲ್ಲಿದೆ. ದಕ್ಷಿಣ ಕನ್ನಡದ ಭಾಷೆಯ ಸೊಗಡನ್ನು ಈ ಚಿತ್ರಕ್ಕಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು.Sign in to your account
Username or Email Address


Password

 Remember Me


