ಬೆಂಗಳೂರು: ಎಂಎಲ್‍ಸಿ ಡಾ. ಸೂರಜ್ ರೇವಣ್ಣ (Dr. Suraj Revanna) ಅವರ ಸಲಿಂಗಕಾಮ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ದೊರೆಯುತ್ತಿದೆ. ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ ನಾಪತ್ತೆಯಾದರೆ ಇತ್ತ ಶಿವಕುಮಾರ್ ವಿರುದ್ಧವೇ ಸಂತ್ರಸ್ತ ಇದೀಗ ದೂರು ನೀಡಿದ್ದಾನೆ.ಶಿವಕುಮಾರ್ ಬಳಿ ಎಲ್ಲವನ್ನೂ ನಾನು ಹೇಳಿದ್ದೆ. ಆತ ಆಸ್ಪತ್ರೆಗೆ ಹೋಗಲು ಬಿಡದೆ ಕೂಡಿ ಹಾಕಿದ್ದ. 2 ಕೋಟಿ ಹಣ, ಕೆಲಸ ಕೊಡಿಸುವುದಾಗಿ ಹೇಳಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡ್ತೇನೆ ಅಂತ ಬೆದರಿಕೆಯೂ ಹಾಕಿದ್ದ ಎಂದು ಸಂತ್ರಸ್ತ ಪೊಲೀಸರ ಮುಂದೆ ದೂರಿದ್ದಾನೆ.ದೂರಿನಲ್ಲಿ ಏನಿದೆ..?: ನನ್ನ ಮೇಲೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ (Shivakumar) ಬಳಿ ಹೇಳಿದ್ದೆ. ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ. ಶಿವಕುಮಾರ್ ತನ್ನ  ಫೋನ್‍ ಮೂಲಕ ಸೂರಜ್ ಜೊತೆ ಮಾತನಾಡಿಸಿದರು. ಅಲ್ಲದೇ 2 ಕೋಟಿ ರೂ. ಹಣ, ಕೆಲಸ ಕೊಡಿಸುವುದಾಗಿ ಹೇಳಿದ್ದರು. ನಾನು ಒಪ್ಪದಿದ್ದಾಗ ಬಾಯಿಬಿಟ್ಟರೆ ನಿನ್ನ ಮುಗಿಸ್ತೇನೆ ಎಂದು ಶಿವಕುಮಾರ್ ಕೊಲೆ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾನೆ.ಶಿವಕುಮಾರ್ ನನ್ನನ್ನು ಮನೆಗೆ ಹೋಗಲು ಬಿಡದೆ ಲಾಡ್ಜ್ ನಲ್ಲಿ ಕೂಡಿ ಹಾಕಿದ್ದ. ನನ್ನಿಂದಲೇ 1,000 ರೂ ಹಣ ಪಡೆದು ಊಟದ ವ್ಯವಸ್ಥೆ ಮಾಡಿದ್ದ. ನಂತರ ಅಲ್ಲಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಗೆ ಹೋದೆ. ಶಿವಕುಮಾರ್ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.Sign in to your account
Username or Email Address


Password

 Remember Me


