ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮಗೆ ಮೋಸ ಮಾಡಿದ್ದಾರೆಂದು ಪ್ರಮೋದ್ ಶರ್ಮಾ ಎನ್ನುವವರು ದೆಹಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಸೋನಾಕ್ಷಿಗೆ ಜಾಮೀನು ರಹಿತ್ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ಹೇಳಲಾಗಿತ್ತು. ಈ ಕುರಿತು ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳುಕಾರ್ಯಕ್ರಮವೊಂದಕ್ಕೆ ಹಾಜರಾಗಲು ಆಯೋಜಕರಿಗೆ ಸೋನಾಕ್ಷಿ 37 ಲಕ್ಷ ರೂಪಾಯಿ ಪಡೆದೂ, ಹಾಜರಾಗದೇ ಕೈ ಕೊಟ್ಟಿದ್ದಾರೆ ಎಂದು ಆಯೋಜಕರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಅದು ನಂತರ ನಾನಾ ರೂಪ ಪಡೆದುಕೊಂಡಿತ್ತು. ಅನೇಕ ಮಾಧ್ಯಮಗಳು ಸೋನಾಕ್ಷಿಗೆ ಅರೆಸ್ಟ್ ವಾರೆಂಟ್ ಎಂದೂ ಸುದ್ದಿ ಮಾಡಿದ್ದವು. ಅದಕ್ಕವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ“ನಾನು ಯಾವ ಕಾರ್ಯಕ್ರಮವನ್ನೂ ಒಪ್ಪಿಕೊಂಡಿಲ್ಲ. ಅಂತಹ ಯಾವುದೇ ವ್ಯವಹಾರ ಕೂಡ ಆಗಿಲ್ಲ. ನನ್ನ ಮೇಲೆ ದೂರು ನೀಡಿದರೆ, ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಆ ವ್ಯಕ್ತಿ ಹಾಗೆ ಮಾಡಿದ್ದಾರೆ. ನನಗೆ ಯಾವುದೇ ಅರೆಸ್ಟ್ ವಾರೆಂಟ್ ಬಂದಿಲ್ಲ. ಎಲ್ಲವೂ ಸುಳ್ಳು ಸುದ್ದಿ’ ಎಂದು ಹೇಳುವ ಮೂಲಕ ಘಟನೆಗೆ ಪ್ರತಿಕ್ರಯಿಸಿದ್ದಾರೆ. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆಅಲ್ಲದೇ, ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ವಿವರ ಪಡೆದಿರುವ ಅವರು, ತಮ್ಮ ವಕೀಲರ ಮೂಲಕ ಅವರಿಗೆ ಸರಿಯಾದ ಉತ್ತರ ಕೊಡುವುದಾಗಿ ಹೇಳಿಕೊಂಡಿದ್ದಾರೆ.Sign in to your account
Username or Email Address


Password

 Remember Me


