ಸ್ಯಾಂಡಲ್ ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ಹುಟ್ಟು ಹಬ್ಬವನ್ನು ಆಪ್ತರಷ್ಟೇ ಸೇರಿಕೊಂಡು ಬೆಂಗಳೂರಿನಲ್ಲಿ ಆಚರಿಸಿದರು. ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದಾಗಿ ಈ ಬಾರಿ ಅದ್ಧೂರಿಯಾಗಿ ಆಚರಣೆ ಇರಲಿಲ್ಲ. ಹಾಗಾಗಿ ಕುಟುಂಬ ಮತ್ತು ಆಪ್ತರಷ್ಟೇ ಸೇರಿಕೊಂಡಿದ್ದರು.  ಇದನ್ನೂ ಓದಿ : ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್ನಟ ಯಶ್ ಮತ್ತು ಇಬ್ಬರು ಮಕ್ಕಳು ರಾಧಿಕಾ ಪಂಡಿತ್ ಅವರಿಗೆ ಹುಟ್ಟು ಹಬ್ಬಕ್ಕಾಗಿ ವಿಶೇಷ ಉಡುಗೊರೆ ನೀಡಿದರು. ಅಲ್ಲದೇ, ವಿಶೇಷ ವಿನ್ಯಾಸದ ಕೇಕ್ ತಯಾರಿಸಲಾಗಿತ್ತು. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರಈ ಬಾರಿಯ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಮತ್ತೆ ನಟನೆಗೆ ಮರಳುವಿರಾ ಎಂದೂ ಪ್ರಶ್ನೆ ಮಾಡಿದ್ದರು. ಆದರೆ, ರಾಧಿಕಾ ಮಾತ್ರ ಯಾವುದೇ ಉತ್ತರ ಕೊಟ್ಟಿಲ್ಲ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್ಮಕ್ಕಳ ಕಾರಣದಿಂದಾಗಿ ಚಿತ್ರರಂಗದಿಂದ ದೂರ ಇರುವ ರಾಧಿಕಾ ಪಂಡಿತ್, ಮತ್ತೆ ಈಗ ಸಿನಿಮಾ ರಂಗಕ್ಕೆ ಬರುವ ಆಲೋಚನೆ ಮಾಡಿದ್ದಾರಂತೆ. ಆದರೆ, ಯಾರ ಸಿನಿಮಾದ ಮೂಲಕ ಅವರು ಕಮ್ ಬ್ಯಾಕ್ ಆಗುತ್ತಾರೆ ಎನ್ನುವುದೇ ಕುತೂಹಲ.Sign in to your account
Username or Email Address


Password

 Remember Me


