ಮೊದಲ ಬಾರಿಗೆ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಓದಿದ್ದೀರಿ. ಆ ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನಡೆದಿದೆ. ಅಂದು ದುನಿಯಾ ವಿಜಯ್ ಹೋಗಿರಲಿಲ್ಲ. ಹಾಗಾಗಿ ವಿಜಯ್ ಆ ಚಿತ್ರದಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಈ ಎಲ್ಲದಕ್ಕೂ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ. ನೆನ್ನೆಯಷ್ಟೇ ದುನಿಯಾ ವಿಜಯ್ ತೆಲುಗು ಸಿನಿಮಾದ ಶೂಟಿಂಗ್ ಗಾಗಿ ತೆರಳಿದ್ದಾರೆ. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ಈ ಹೊಸ ಸಿನಿಮಾದಲ್ಲಿ ವಿಜಯ್ ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಗಾಗಿ ವಿಜಯ್, ಪತ್ನಿಯೊಂದಿಗೆ ತೆರಳಿದ್ದಾರೆ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್ವಿಲನ್ ಆಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ದುನಿಯಾ ವಿಜಯ್, ಆನಂತರ ದುನಿಯಾ ಚಿತ್ರ ಅವರನ್ನು ಹೀರೋ ಆಗಿ ಮಾಡಿತು. ಅಲ್ಲಿಂದ ಅವರು ನಾಯಕರಾಗಿಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಈಗ ಮತ್ತೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದು ತೆಲುಗು ಸಿನಿಮಾದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯಗೋಪಿಚಂದ್ ಮಲಿನೇನೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಯ್ಯನ 107ನೇ ಸಿನಿಮಾ ಇದಾಗಿದೆ. ಎರಡು ವಾರದಿಂದ ಸಿನಿಮಾದ ಶೂಟಿಂಗ್ ನಡೆದಿದ್ದು, ಇಂದಿನಿಂದ ದುನಿಯಾ ವಿಜಯ್ ಅವರ ದೃಶ್ಯಗಳನ್ನು ಸೆರೆ ಹಿಡಿಯುತ್ತಾರಂತೆ ನಿರ್ದೇಶಕರು.Sign in to your account
Username or Email Address


Password

 Remember Me


