ಬೆಂಗಳೂರು: ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ ಶವಾಗಾರದಲ್ಲಿ ನವೀನ್‍ನ ಮೃತ ದೇಹ ಇಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನವೀನ್ ಮೃತ ದೇಹವನ್ನು ತರುವ ಬಗ್ಗೆ ಕೇಂದ್ರ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ. ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.ರಷ್ಯಾ ಉಕ್ರೇನ್ ಮೇಲೆ ಇನ್ನೂ ದಾಳಿ ನಡೆಸುತ್ತಿದೆ. ಜೊತೆಗೆ ಉಕ್ರೇನ್‍ನಲ್ಲಿ ಶೆಲ್ ದಾಳಿ ಇನ್ನೂ ನಡೀತಿದೆ. ಅದು ನಿಂತ ಮೇಲೆ ಮೃತ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುವುದು ಚುನಾವಣೆ ವೇಳೆಯೇ ನಿರೀಕ್ಷೆ ಇತ್ತು. ಯುಪಿ, ಉತ್ತರಾಖಂಡ್, ಗೋವಾ, ಮಣಿಪುರಗಳಲ್ಲಿ ಜಯ ಸಾಧಿಸುವುದು ಗೊತ್ತಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆ ಚುನಾವಣಾ ಸಮಿಕ್ಷೆಗಳು ಸಹ ಬಂದಿದೆ. ಇನ್ನೂ ಎರಡು ದಿನ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರSign in to your account
Username or Email Address


Password

 Remember Me


