ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಸಚಿವ ಆರ್.ಅಶೋಕ್‍ಗೆ ಇಬ್ಬರು ನಾಯಕರು ಟಕ್ಕರ್ ಕೊಟ್ಟರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಅಶೋಕ್ ಕಾಲೆಳೆದಾಗ ಇಡೀ ಸದನವೇ ನಗೆಗಡಲಲ್ಲಿ ತೇಲಿತು.ಅಂದಹಾಗೆ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದ್ದು ನಿಂತರು. ಪ್ರಶ್ನೋತ್ತರ ಕಲಾಪ ಮುಗಿಸಿ ಸಿದ್ದರಾಮಯ್ಯ ಮಾತನಾಡುವಾಗ ಸದನದಿಂದ ಹೊರ ನಡೆಯಲು ಆರ್.ಅಶೋಕ್, ಮುನಿರತ್ನ ಮುಂದಾದರು. ಆಗ ತಕ್ಷಣ ನೋಡಿದ ಸಿದ್ದರಾಮಯ್ಯ.. ಏ… ಮುನಿರತ್ನ, ಅಶೋಕ್ ಕೂತ್ಕೊಳ್ರಪ್ಪ ಅಂತಾ ಕಾಲೆಳೆದ್ರು. ಸರ್ ನಾನು ನೀರು ಕುಡಿಯೋಕೆ ಹೋಗ್ತಿದ್ದೆ ಅಷ್ಟೇ ಅಂತಾ ಆರ್.ಆಶೋಕ್ ಹೇಳಿದ್ರು. ಓಹೋ.. ನೀರು ತಾನೇ… ಇಲ್ಲಿಗೇ ನೀರು ಕೊಡ್ತಾರೆ ಕೂತ್ಕೊಳಪ್ಪ, ನೀರು ಕೊಡ್ರಿ ಅಶೋಕ್‍ಗೆ ಅಂತಾ ಸಿದ್ದರಾಮಯ್ಯ ನಗುನಗುತ್ತಾ ಹೇಳಿದ್ರು. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಆಗಿದ್ದಕ್ಕೆ ಬಿಜೆಪಿ ನಾಯಕರ ಕಾಲೆಳೆದ ಸಿದ್ದರಾಮಯ್ಯಸಿದ್ದರಾಮಯ್ಯ ಹೇಳುತ್ತಿದಂತೆ ತಮ್ಮ ಆಸನಕ್ಕೆ ಬಂದು ಅಶೋಕ್ ಕುಳಿತ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಯಡಿಯೂರಪ್ಪ ಅವರು… ಸಿದ್ರಾಮಣ್ಣ.. ಈ ಅಶೋಕ್ ನೀರು ಕುಡಿಯೋದಕ್ಕೆ ಹೋಗ್ತಿರಲಿಲ್ಲ. ಸುಮ್ಮನೆ ಹೊರಗೆ ಹೊಗ್ತಿದ್ದದ್ದು ಅಂತಾ ಅಶೋಕ್ ಕಾಲೆಳೆದ್ರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಹೌದೌದು… ನೀವು ಹಿಂದೆ ಕುಳಿತಿದ್ದೀರಿ, ಇಂತದ್ದನ್ನೆಲ್ಲ ಗಮನಿಸುತ್ತೀರಿ ಅಂತಾ ಗೊತ್ತು. ಹೊರಗೆ ಹೋಗೋರನ್ನ ಒಳಗೆ ಕೂರಿಸ್ತೀರಿ ಅಂತೇಳಿದ್ರು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ, 25 ಬಿಜೆಪಿ ಸಂಸದರಿದ್ರೂ ಹಣ ಕೇಳಲ್ಲ: ಸಿದ್ದರಾಮಯ್ಯ ವಾಗ್ದಾಳಿಇನ್ನೊಂದೆಡೆ ವಿಧಾನಸಭೆಯಲ್ಲಿ ಸ್ಪೀಕರ್ ಗೆ ವೆರಿ ಗುಡ್.. ಗುಡ್.. ಅಂತಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ರು. ಪ್ರಶ್ನೋತ್ತರ ಕಲಾಪದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಕೊಟ್ಟಿದ್ದೀನಿ ಎಂದ ಸ್ಪೀಕರ್‍ಗೆ ವೆರಿ ಗುಡ್.. ಗುಡ್ ಅಂದ್ರು ಸಿದ್ದರಾಮಯ್ಯ. ನನಗೆ ನೀವು ಗುಡ್ ಅನ್ನಲೇಬೇಕು ಅಲ್ಲವಾ ಅಂತಾ ಸ್ಪೀಕರ್ ಮತ್ತೆ ಹೇಳಿದಾಗ ಹೌದು.. ಹೌದು ಯುವರ್ ಮೈ ಗುಡ್ ಫ್ರೆಂಡ್ ಅಂತಾ ಸಿದ್ದರಾಮಯ್ಯ ನಕ್ಕಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.Sign in to your account
Username or Email Address


Password

 Remember Me


