ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ (Amulya) ಮತ್ತು ಜಗದೀಶ್ ದಂಪತಿ ಅವಳಿ ಮಕ್ಕಳ ಪೋಷಕರಾಗಿರುವುದು ಗೊತ್ತಿರುವ ವಿಚಾರವಾಗಿದೆ. ಇದೀ ತಮ್ಮ ಅವಳಿ ಮಕ್ಕಳಿಗೆ ಜಗದೀಶ್ ಅವರು ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗೆ ಬಲೂನ್ ಖರೀದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಬಗ್ಗೆ ಜಗದೀಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಸುಸಜ್ಜಿತ ಶಾಪ್‍ಗೂ ಫುಟ್‍ಪಾತ್‍ನಲ್ಲಿ ಮಾರುವ ಪುಟ್ಟ ಅಂಗಡಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಮನಸ್ಸಿಗೆ ಅನ್ನಿಸಿತು. ಕೆಲವೊಮ್ಮೆ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಶಾಪ್‍ನಲ್ಲಿ ಹೃದಯ ಶ್ರೀಮಂತಿಕೆಯೇ ಬಹಳ ಕಡಿಮೆ ಎಂದೆನಿಸಬಹುದು. ಆದರೆ ಕಡಿಮೆ ಬೆಲೆ ಕೊಟ್ಟು ಸಣ್ಣ ಅಂಗಡಿ ಅಥವಾ ಫುಟ್‍ಪಾತ್‍ನಲ್ಲಿ ಏನನ್ನಾದರೂ ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ಗಮನಕ್ಕೆ ಬರುತ್ತದೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?  A post shared by Jagdish R Chandra (@jagdishrchandra)ಶಿವರಾತ್ರಿಯ ದಿನದಂದು ಜಯನಗರದ ಆಸ್ಪತ್ರೆಯ ಬಲಭಾಗದ ಫುಟ್‍ಪಾತ್‍ನಲ್ಲಿ ಬಲೂನ್ ಮತ್ತು ಆಟಿಕೆಗಳನ್ನು ಮಾರುತ್ತಿದ್ದ ಕಾಲುಗಳಿಲ್ಲದ ವ್ಯಕ್ತಿ ರವಿ ಎನ್ನುವವರು ಅಮೂಲ್ಯ ಮೇಡಂಗೆ ಅವಳಿ ಮಕ್ಕಳಾಗಿದ್ದು ಕೇಳಿ ತುಂಬಾ ಸಂತೋಷವಾಯ್ತು ಸರ್. ಎಲ್ಲರೂ ಚೆನ್ನಾಗಿದಾರಲ್ವಾ? ನೀವು ಯಾವಾಗ ಹೊರಗೆ ಬರುತ್ತೀರಾ ಎಂದು ಕಾಯುತ್ತಿದ್ದೆ ಎಂದು ಆತ್ಮೀಯವಾಗಿ ಮಾತನಾಡಿಸಿದ್ದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!ಶ್ರೀಮಂತರಲ್ಲದಿದ್ದರೂ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಲ್ವಾ? ಕಾಲುಗಳಿಲ್ಲದಿದ್ದರೂ ಸ್ವಾಭಿಮಾನದಿಂದ ನಿತ್ಯ ತನ್ನ ಕೆಲಸ ಮಾಡಿಕೊಂಡು ಶ್ರಮವಹಿಸಿ ತನ್ನ ಜೀವನ ನಡೆಸುತ್ತಿರುವ ಆ ವ್ಯಕ್ತಿಯಿಂದ ಮಕ್ಕಳಿಗಾಗಿ ಮೊದಲ ಆಟಿಕೆಗಳ ರೂಪದಲ್ಲಿ ಎರಡು ಬಲೂನ್‍ನ್ನು ಕೊಂಡೆವು ಎಂದಿದ್ದಾರೆ.ಎಲ್ಲವೂ ಕಮರ್ಷಿಯಲ್ ಮತ್ತು ದುಬಾರಿ ಆಗಿರುವ ಈಗಿನ ಕಾಲದಲ್ಲಿ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೃದಯವಂತರ ಬಳಿ ನಾವು ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ವಾ? ಈ ರೀತಿ ಮಾಡುವುದರಿಂದ ಅವರಿಗೂ ಸಹಾಯವಾಗುತ್ತದೆ. ಅವರು ಇನ್ನಷ್ಟು ಆತ್ಮನಿರ್ಭರವಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ. ನಿಮಗೇನಾದರೂ ಈ ರೀತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರು ಕಂಡರೆ ನೀವೂ ಅವರ ಬಳಿ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿ ಎಂದು ಬರೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


