ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವೆರಿ ಗುಡ್ ಹೇಳಿದ್ದಾರೆ.ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರಶ್ನೋತ್ತರ ಕಲಾಪದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ ಎಂದು ತಿಳಿಸಿದರು. ಆಗ ಸಿದ್ದರಾಮಯ್ಯ ಅವರು, ಸ್ಪೀಕರ್‌ಗೆ ವೆರಿ ಗುಡ್.. ಗುಡ್ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನನಗೆ ನೀವು ಗುಡ್ ಅನ್ನಲೇಬೇಕು ಅಲ್ಲವಾ ಎಂದು ತಮಾಷೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಹೌದು.. ಹೌದು ಯು ಆರ್ ಮೈ ಗುಡ್ ಫ್ರೆಂಡ್ ಎಂದು ತಿಳಿಸಿದರು.ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಲು ಎದ್ದ ವೇಳೆ ಕಂದಾಯ ಸಚಿವ ಅಶೋಕ್ ಸದನದಿಂದ ಹೊರ ನಡೆಯಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಎ.ಮುನಿರತ್ನ, ಅಶೋಕ್ ಕೂತ್ಕೊಳ್ರಪ್ಪ ಎಂದು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ನಾನು ನೀರು ಕುಡಿಯೋಕೆ ಹೋಗ್ತಿದ್ದೇನೆ ಎಂದು ಉತ್ತರಿಸಿದರು. ಆಗ ಸಿದ್ದರಾಮಯ್ಯ ಅವರು ಇಲ್ಲಿಗೇ ನೀರು ಕೊಡ್ತಾರೆ ಕೂತ್ಕೊಳಪ್ಪ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಈ ರೀತಿ ಹೇಳುತ್ತಲೇ ಅಲ್ಲೇ ಅಶೋಕ್ ಕುಳಿತಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರುಈ ವೇಳೆ ಬಿಎಸ್‍ವೈ ಮಧ್ಯಪ್ರವೇಶಿಸಿ, ಅವರು ಸುಮ್ಮನೆ ಹೊರಗೆ ಹೋಗ್ತಿದ್ರು, ನೀರು ಕುಡಿಯಲು ಹೋಗ್ತಿರಲಿಲ್ಲ. ನೀವು ಹೇಳಿದ್ಮೇಲೆ ಅಶೋಕ್ ಕೂತ್ಕೊಂಡ್ರು ಎಂದು ಕಿಚಾಯಿಸಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹೌದು ನೀವು ಹಿಂದೆ ಕುಳಿತಿದ್ದೀರಿ, ಇಂತದ್ದನ್ನೆಲ್ಲ ಗಮನಿಸುತ್ತೀರಿ ಅಂತಾ ಗೊತ್ತು ಎಂದು ಕಾಲೆಳೆದರು.ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರ ಭಾಷಣದ ವೇಳೆ ಇಡೀ ಸದನ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಪರೀಕ್ಷೆ ನಡೆಸಿ ಕರ್ನಾಟಕದ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟ್‌ ನೀಡಿ: ಎಚ್‌ಡಿಕೆSign in to your account
Username or Email Address


Password

 Remember Me


