ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ಶ್ರೀಯಾ ಶರಣ್ ನಟಿಸಲಿದ್ದಾರೆ ಎಂದು ಎರಡು ಗಂಟೆಗಳ ಹಿಂದೆ ಪಬ್ಲಿಕ್ ಟಿವಿ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಅದು ಅಧಿಕೃತವಾಗಿದ್ದು, ಈ ಸಿನಿಮಾದಲ್ಲಿ ಶ್ರೀಯಾ ಅವರು ಮಧುಮತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ರವಿವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಇಡೀ ದಿನ ಫೋಟೋಶೂಟ್ನಲ್ಲಿ ಅವರು ಭಾಗಿಯಾಗಿದ್ದರು. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ಕಬ್ಜ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಮತ್ತೋರ್ವ ತಾರೆಯನ್ನು ಹುಡುಕಿದ್ದು, ಸದ್ಯದಲ್ಲೇ ಆ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ  ಹೆಚ್ಚಾಗಿದೆ.Sign in to your account
Username or Email Address


Password

 Remember Me


