ರಕ್ಷಿತ್ ಶೆಟ್ಟಿ ನಟನೆಯ ‘ಸಿಂಪಲ್ಲಾಗ ಒಂದ್ ಲವ್ ಸ್ಟೋರಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಶ್ವೇತಾ ಶ್ರೀವಾತ್ಸವ್ ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ನಟಿಸುತ್ತಿರುವ ‘ಚಿಕ್ಕಿಯ ಮುಕುಟ್ಟಿ’ ಸಿನಿಮಾಗಾಗಿ ಅವರು ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ. ಇದೊಂದು ಭಾರಿ ಬಜೆಟ್ ಸಿನಿಮಾವಾಗಿದ್ದು, ಹಾಗಾಗಿ ಒಳ್ಳೆಯ ಮೊತ್ತವನ್ನೇ ಈ ಚಿತ್ರಕ್ಕಾಗಿ ನಾನು ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್ಈವರೆಗೂ ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎಂದೂ ಎಲ್ಲಿಯೂ ಹೇಳಿಕೊಂಡಿಲ್ಲ. ಹೊಸ ಚಿತ್ರಕ್ಕೆ ಎಷ್ಟು ತಗೆದುಕೊಂಡಿದ್ದಾರೆ ಎಂದೂ ಅವರು ಬಹಿರಂಗ ಪಡಿಸಿಲ್ಲ. ಆದರೆ, ಹೆಚ್ಚಿನ ಸಂಭಾವನೆಯಂತೂ ಈ ಚಿತ್ರಕ್ಕಾಗಿ ಪಡೆದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?‘ಚಿಕ್ಕಿಯ ಮುಕಟ್ಟಿ’ ದೇವಿಕಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಹೆಣ್ಣು ಮಗುವನ್ನು ಉಳಿಸಿ ಎಂಬ ಸಂದೇಶವನ್ನು ಈ ಚಿತ್ರ ನೀಡಲಿದೆಯಂತೆ. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್ಈಗಾಗಲೇ ಎರಡು ಚಿತ್ರಗಳ ಶೂಟಿಂಗ್ ಮುಗಿಸಿರುವ ಅವರು, ಎರಡೂ ಚಿತ್ರಗಳು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಗ್ಗೇಶ್ ಜತೆ ತೆರೆ ಹಂಚಿಕೊಂಡ ಖುಷಿ ಕೂಡ ಅವರಲ್ಲಿದೆ. ಒಂದು ಮಗುವಿನ ತಾಯಿಯಾಗಿಯೂ ಅವರು ಹೊಸ ಹೊಸ ಸವಾಲಿನ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ತಾವೊಬ್ಬ ವಿಭಿನ್ನ ನಟಿ ಎಂದು ನಿರೂಪಿಸುತ್ತಿದ್ದಾರೆ.Sign in to your account
Username or Email Address


Password

 Remember Me


