ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ‘ಪೆದ್ರೊ’ ಸಿನಿಮಾಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮನ್ನಣೆ ಸಿಗಲಿಲ್ಲ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಬೇಸರ ವ್ಯಕ್ತ ಪಡಿಸಿದ್ದರು. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ಈ ಚಿತ್ರಕ್ಕೆ ಅನ್ಯಾಯವಾಗಿದೆ ಎಂದು ರಿಷಬ್ ಧ್ವನಿ ಎತ್ತುತ್ತಿದ್ದಂತೆಯೇ ಇನ್ನೂ ಅನೇಕ ನಿರ್ದೇಶಕರು ಕೂಡ ರಿಷಬ್ ಪರ ನಿಂತುಕೊಂಡರು. ಆದರೂ, ಚಿತ್ರೋತ್ಸವ ‘ಪೆದ್ರೊ’ ಮರೆತು ಐದು ದಿನಗಳಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅದು ಈ ಸಿನಿಮಾ ಮತ್ತು ಚಿತ್ರೋತ್ಸವದ ಕುರಿತಾಗಿಯೇ ಎನ್ನುವುದು ವಿಶೇಷ. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?ಇನ್ನೇನು ಸದ್ಯದಲ್ಲೇ ಶುರುವಾಗಲಿರುವ ಕೇರಳ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವೆಲ್ ಗೆ ‘ಪೆದ್ರೊ’ ಆಯ್ಕೆಯಾಗಿದೆ. ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಅದು ಪ್ರದರ್ಶನಗೊಳ್ಳಲಿದೆ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿನಾಗೇಶ್ ಹೆಗ್ಡೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರ್ದೇಶಕರ ತಂದೆಯೇ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ರಿಯಾಲಿಸ್ಟಿಕ್ ಸಿನಿಮಾವಾಗಿದ್ದು, ಈ ಹಿಂದೆ ತೆರೆಕಂಡ ‘ತಿಥಿ’ ಮಾದರಿಯಲ್ಲೇ ಮೂಡಿ ಬಂದಿದೆ.Sign in to your account
Username or Email Address


Password

 Remember Me


