ನಟ ಯಶ್ ಪತ್ನಿ, ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೇ ಅಭಿಮಾನಿಗಳು ಕರೆಯುವ ರಾಧಿಕಾ ಪಂಡಿತ್ ಇಂದು 38ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರ ಅಭಿಮಾನಿಗಳು ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಾದರೂ, ಆ ಬೇಡಿಕೆಯನ್ನು ಈಡೇರಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್ಅಭಿಮಾನಿಗಳು ಇಟ್ಟಿರೋ ಬೇಡಿಕೆ ಸಿಂಪಲ್. ಮತ್ತೆ ನೀವು ಸಿನಿಮಾ ರಂಗಕ್ಕೆ ಬರುವುದು ಯಾವಾಗ? ಅದಕ್ಕೆ ರಾಧಿಕಾ ಪಂಡಿತ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾಕನ್ನಡ ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್, ಆನಂತರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಮೊಗ್ಗಿನ ಮನಸು ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತು. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟರ ಜತೆ ತೆರೆ ಹಂಚಿಕೊಂಡರು. ಅದರಲ್ಲೂ ಯಶ್ ಜತೆಗಿನ ಮಿಸ್ಟರ್ ಅಂಡ್ ಮಿಸ್ಟರ್ ರಾಮಾಚಾರಿ, ಡ್ರಾಮಾ ಹೀಗೆ ಅನೇಕ ಚಿತ್ರಗಳು ಹಿಟ್ ಆದವು. ಕಿರುತೆರೆಯಿಂದಲೇ ಯಶ್ ಜತೆ ಒಂದೊಳ್ಳೆ ಗೆಳೆತನ ಇಟ್ಟುಕೊಂಡಿದ್ದ ರಾಧಿಕಾ, ಆ ಮೇಲೆ ಪ್ರೇಮಿಯಾದರು. ನಂತರ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್ಅಭಿಮಾನಿಗಳ ಒತ್ತಾಯದಂತೆ ರಾಧಿಕಾ ಸಿನಿಮಾ ರಂಗಕ್ಕೆ ವಾಪಸ್ಸು ಆಗುತ್ತಾರಾ? ಎನ್ನುವ ಪ್ರಶ್ನೆ ಹಲವರದ್ದು. ಆದರೆ, ಸಿನಿಮಾಗೆ ಬರುವ ಯಾವ ಸೂಚನೆಯನ್ನೂ ಅವರು ಈವರೆಗೂ ಕೊಟ್ಟಿಲ್ಲ. ಅಂದುಕೊಂಡಂತೆ ಆಗಿದ್ದರೆ ಮಂಸೋರೆ ನಿರ್ದೇಶನದ ಆಕ್ಟ್ 1978 ಸಿನಿಮಾದ ಮೂಲಕ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಬೇಕಿತ್ತು. ಮಂಸೋರೆ ಅಂಡ್ ಟೀಮ್ ಅವರನ್ನು ಅಪ್ರೋಚ್ ಕೂಡ ಮಾಡಿತ್ತು. ಆದರೆ, ಆಗ ಅವರು ಗರ್ಭಿಣಿ ಹಾಗಾಗಿ ಒಪ್ಪಿಕೊಳ್ಳಲಿಲ್ಲ ಎನ್ನವ ಮಾತಿದೆ. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್ಪುನೀತ್ ನಿಧನದಿಂದಾಗಿ ರಾಧಿಕಾ ಪಂಡಿತ್ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮೂಲಕವೇ ಶುಭ ಕೋರಿದ್ದಾರೆ.Sign in to your account
Username or Email Address


Password

 Remember Me


