ಕೆಜಿಎಫ್ ಮೂವೀ ಲೋಕೆಶನ್ ನೋಡಿ ಅಭಿಮಾನಿಗಳು ದಂಗಾಗಿದ್ರು. ಯಾವುದಾದರೂ ಮೂವೀ ಇಷ್ಟವಾದ್ರೆ, ಆ ಲೋಕೆಶನ್‍ಗೆ ನಾವು ಹೋಗಬೇಕು ಎಂದು ಅನಿಸುವುದು ಸಾಮಾನ್ಯ. ಅದರಂತೆ ಕೆಜಿಎಫ್ ಮೂವೀ ನೋಡಿದವರು ಲೋಕೆಶನ್ ನೋಡಿ ಸಖತ್ ಇಂಪ್ರೆಸ್ ಆಗಿದ್ದರು. ಈಗ ಆ ಲೋಕೆಶನ್‍ನನ್ನು ಗೂಗಲ್ ತೋರಿಸುತ್ತಿದೆ.ಕನ್ನಡದ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್-ಚಾಪ್ಟರ್ 2’ ಇದೇ ವರ್ಷ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಕನ್ನಡಿಗರು ಮಾತ್ರವಲ್ಲ ಇಡೀ ಜಗತ್ತೇ ಕಾತೂರದಿಂದ ಕಾಯುತ್ತಿದೆ. ಅದಕ್ಕೆ ತಕ್ಕತ್ತೆ ಈ ಸಿನಿಮಾತಂಡ ಸಹ ಹೊಸ ಹೊಸ ಸುದ್ದಿಗಳನ್ನು ಕೊಡುತ್ತ ಜನರಿಗೆ ಇನ್ನೂ ಸಿನಿಮಾ ನೋಡಲು ಕುತೂಹಲ ಮೂಡಿಸುತ್ತಿದೆ. ಅಲ್ಲದೇ ಈ ಸಿನಿಮಾ ರಿಲೀಸ್ ಸಹ ಆಗಿಲ್ಲ. ಈ ನಡುವೆಯೇ ಕೆಜಿಎಫ್ 2 ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್‍ಗೆ ರಾಜಮೌಳಿ ಮೆಚ್ಚುಗೆ‘ಕೆಜಿಎಫ್’ ದಾಖಲೆಗೆ ಈಗ ಮತ್ತೊಂದು ಹೊಸ ದಾಖಲೆ ಸೇರಿಕೊಂಡಿದ್ದು, ಈ ಮೂಲಕ ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಯಾವುದೇ ಸೆಟ್‍ಗಳನ್ನು ಹಾಕಿದರು ತಾತ್ಕಾಲಿಕವಾಗಿರುತ್ತೆ. ಸೆಟ್ ಹಾಕಿದ ಮೇಲೆ ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ ಕೆಜಿಎಫ್ ಸೆಟ್ ತೆರವಾದರೂ, ಆ ಜಾಗ ಮಾತ್ರ ಕೆಜಿಎಫ್ ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದೆ.ಗೂಗಲ್ ಮ್ಯಾಪ್‍ನಲ್ಲಿ ‘ಕೆಜಿಎಫ್’ ಸೆಟ್‍ನ ವಿಳಾಸ ಸೃಷ್ಟಿಯಾಗಿದೆ. ‘ಕೆಜಿಎಫ್’ ಸಿನಿಮಾ ಶೂಟಿಂಗ್ ಮಾಡಿದ ಸ್ಥಳ ಗೂಗಲ್ ನಲ್ಲಿ ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಮರುನಾಮಕರಣಗೊಂಡಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಿಂದೆ ಯಾರು ಮಾಡಿರದ ಹೊಸ ದಾಖಲೆಯನ್ನು ಕೆಜಿಎಫ್ ಸಿನಿಮಾ ಮಾಡಿದೆ.‘ಕೆಜಿಎಫ್’ ಸೆಟ್ ಎಂದು ಟೈಪ್ ಮಾಡಿದಾಗ ‘ಕೆಜಿಎಫ್ ಫಿಲ್ಮ್ ಸೆಟ್’ ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ ‘ಕೆಜಿಎಫ್’ ಸೇರಿದಂತೆ, ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಲ್ಲೇ ‘ಕೆಜಿಎಫ್’ನಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಆ ಸೆಟ್‍ನಲ್ಲಿ ‘ಕೆಜಿಎಫ್’ ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸಿನಿಮಾ ಸೆಟ್ ಹಲವು ವರ್ಷಗಳ ಕಾಲ ಅಲ್ಲೇ ಉಳಿಸಿಕೊಂಡಿತು. ಈಗ ಆ ಜಾಗ ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದೆ. ಇದನ್ನೂ ಓದಿ: ಮಜಾಟಾಕೀಸ್ ರಾಣಿಯ ಸ್ನೇಹಿತೆ ಉಕ್ರೇನ್ ನಲ್ಲಿ ಕಳೆದ 10 ದಿನಗಳು: ಶ್ವೇತಾ ಚೆಂಗಪ್ಪ ಬಿಚ್ಚಿಟ್ಟ ರಹಸ್ಯ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಗೂಗಲ್ ನಲ್ಲಿ ಹಾಕಿದರೆ ಸಾಕು ಆ ಸಿನಿಮಾ ಲೋಕೇಶ್ ನನ್ನು ಅದೇ ತೋರಿಸುತ್ತೆ. ಈ ಹಿಂದೆ ಕೆಜಿಎಫ್ 2 ಸಿನಿಮಾ ಟೀಸರ್ ಅಧಿಕೃತವಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನ ಲಿಂಕ್ ಲೀಕ್ ಆಗಿತ್ತು. ಆದರೂ ಕೂಡ, ರಿಲೀಸ್ ಆದ ಟೀಸರ್ ಕಡಿಮೆ ಸಮಯದಲ್ಲೇ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿತ್ತು. ವಿಶ್ವಮಟ್ಟದಲ್ಲಿ ದಾಖಲೆ ಮಾಡಿತು.Sign in to your account
Username or Email Address


Password

 Remember Me


