ಖುಷ್ಬು ಅಂದಾಕ್ಷಣ ತಕ್ಷಣವೇ ನೆನಪಾಗುವ ಸಿನಿಮಾ ‘ರಣಧೀರ’. ಈ ಚಿತ್ರದ ರವಿಚಂದ್ರನ್ ಮತ್ತು ಖುಷ್ಬು ಜೋಡಿ ಮರೆಯುವುದುಂಟೆ. ನಂತರ ಇವರು ಜತೆಯಾಗಿ ಎರಡು ಚಿತ್ರಗಳಲ್ಲೂ ಕಾಣಿಸಿಕೊಂಡರು. ಆ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರಿಂದ ಹಿಟ್ ಜೋಡಿ ಎಂದೇ ಸ್ಯಾಂಡಲ್ ವುಡ್ ಕರೆಯುತ್ತಿತ್ತು. ನಂತರ ಖುಷ್ಬು ಬೇರೆ ಬೇರೆ ಚಿತ್ರಗಳಲ್ಲಿ ನಟಿಸರೂ, ಕ್ರೇಜಿಸ್ಟಾರ್ ಜತೆ ನಟಿಸಲು ಮತ್ತೆ ಅವರಿಗೆ ಅವಕಾಶವೇ ಸಿಕ್ಕಿರಲಿಲ್ಲ. ಯುಗ ಪುರುಷ ಸಿನಿಮಾ ನಂತರ ಮತ್ತೆ ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದೆ. ಕಿರೀಟಿ ನಟನೆಯ ಹೊಸ ಸಿನಿಮಾದಲ್ಲಿ ನಾಯಕನ ತಂದೆಯಾಗಿ ರವಿಚಂದ್ರನ್ ನಟಿಸುತ್ತಿದ್ದರೆ, ತಾಯಿಯಾಗಿ ಖುಷ್ಬು ಪಾತ್ರ ನಿರ್ವಹಣೆ ಮಾಡಲಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ2005ರಲ್ಲಿ ತೆರೆಕಂಡ ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ಖುಷ್ಬು ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರು. ನಂತರ ಜನನಿ ಸಿನಿಮಾದಲ್ಲಿ ಅವರದ್ದು ಗೆಸ್ಟ್ ರೋಲ್. ಈ ಸಿನಿಮಾ ರಿಲೀಸ್ ಆಗಿದ್ದು 2010ರಲ್ಲಿ. ಬರೋಬ್ಬರಿ ಹನ್ನೆರಡು ವರ್ಷಗಳ ನಂತರ ಖುಷ್ಬು ಸ್ಯಾಂಡಲ್ ವುಡ್ ಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್ಈಗಾಗಲೇ ರವಿಚಂದ್ರನ್ ಸುದೀಪ್, ದರ್ಶನ್ ಸೇರಿದಂತೆ ಹಲವು ನಟರ ಸಿನಿಮಾಗಳಲ್ಲಿ ತಂದೆಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹೊಸ ಹುಡುಗನ ಚಿತ್ರಕ್ಕೆ ತಂದೆಯಾಗಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.Sign in to your account
Username or Email Address


Password

 Remember Me


