ಬೀದರ್: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಕೊನೆಗೂ ಸೇಫಾಗಿದ್ದಾರೆ.ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿ ಪರದಾಡಿದ್ದ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ್ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ವೈಷ್ಣವಿ  ಪೋಲ್ಯಾಂಡ್ ನಿಂದ ಇಂದು ದೆಹಲಿಗೆ ಆಗಮಿಸಿ ಸೇಫಾಗಿದ್ದಾರೆ. ಇದನ್ನೂ ಓದಿ: ಮಜಾಟಾಕೀಸ್ ರಾಣಿಯ ಸ್ನೇಹಿತೆ ಉಕ್ರೇನ್ ನಲ್ಲಿ ಕಳೆದ 10 ದಿನಗಳು: ಶ್ವೇತಾ ಚೆಂಗಪ್ಪ ಬಿಚ್ಚಿಟ್ಟ ರಹಸ್ಯಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಸಹ ಪೋಲ್ಯಾಂಡ್ ನಿಂದ ದೆಹಲಿಗೆ ಆಗಮಿಸಿದ್ದು, ಉಕ್ರೇನ್‍ನಲ್ಲಿ ಸಿಲುಕಿರುವ ಇಬ್ಬರು ವಿದ್ಯಾರ್ಥಿಗಳು ಸೇಫಾಗಿದ್ದಾರೆ. ಇಬ್ಬರು ದೆಹಲಿಯಿಂದ ಬೆಂಗಳೂರಿನತ್ತ ಹೊರಟು ರಾತ್ರಿ ವೇಳೆಗೆ ಬೀದರ್‍ಗೆ ಬರುವ ಸಾಧ್ಯತೆ ಇದೆ.ಶಶಾಂಕ್ ಮತ್ತು ವಿವೇಕ್ ಉಳಿದ ಇಬ್ಬರು ವಿದ್ಯಾರ್ಥಿಗಳು ಇನ್ನೂ ಖಾರ್ಕಿವ್ ನ ಪಿಶಾಚಿನ್‍ನಲ್ಲೆ ಇದ್ದಾರೆ. ಪಿಶಾಚಿನ್ ನಿಂದ ಬಸ್ ಮೂಲಕ ಪೋಲ್ಯಾಂಡ್ ತಲುಪಿ ಭಾರತಕ್ಕೆ ಬರುವ ಸಾಧ್ಯತೆ ಇದೆ.Sign in to your account
Username or Email Address


Password

 Remember Me


