ಚಾಮರಾಜನಗರ: ಗಣಿಗಾರಿಕೆ ನಡೆಯುತ್ತಿದ್ದ ಕ್ವಾರಿಯಲ್ಲಿ ಗುಡ್ಡ ಕುಸಿತವಾಗಿದೆ. ಘಟನೆಯಲ್ಲಿ 2 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮೂರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದಲ್ಲಿ, ಗುಡ್ಡ ಕುಸಿತ ಉಂಟಾಗಿದೆ. ಜೆಸಿಬಿ, ಟಿಪ್ಪರ್ ವಾಹನ, ಟ್ರಾಕ್ಟರ್‌ಗಳು ನಜ್ಜುಗುಜ್ಜುಗಿದೆ. ದೊಡ್ಡ ಬಂಡೆಗಳು ಉರುಳಿವೆ. ಗಾಯಾಳುಗಳು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಿತ್ಯವೂ ಕೂಡ ಶ್ರೀರಾಮ ಗುಡ್ಡದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಗುಡ್ಡದಲ್ಲಿ 30ಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದರು. ಕೇರಳ, ತಮಿಳುನಾಡು ಸೇರಿ ಇತರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳಕ್ಕೆ ಎಸ್ಪಿ ಶಿವಕುಮಾರ್, ಡಿಸಿ ಚಾರುಲತಾ ಸೋಮಲ್ ಬಂದಿದ್ದಾರೆ.Sign in to your account
Username or Email Address


Password

 Remember Me


