ಮಡಿಕೇರಿ: ಬಹುಭಾಷಾ ತಾರೆ, ನಟಿ ಸಂಜನಾ ಗಲ್ರಾನಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆ್ಯಡಂ ಬಿದ್ದಪ್ಪ ಸದ್ಯ ಪೊಲೀಸರ ವಶದಲ್ಲಿರುವ ಯುವಕ. ಈತನನ್ನು ನಿನ್ನೆ ತಡರಾತ್ರಿ ಇಂದಿರಾನಗರ ಪೊಲೀಸರು ಮಡಿಕೇರಿಗೆ ಬಂದು ವಶಕ್ಕೆ ಪಡೆದಿದ್ದಾರೆ. ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಪುತ್ರನಾಗಿರುವ ಆ್ಯಡಂ ಬಿದ್ದಪ್ಪ, ಸಂಜನಾಗೆ ನಿಂದಿಸಿ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠವಾಟ್ಸಪ್ ಮೆಸೇಜ್‍ನಿಂದ ನೊಂದ ಸಂಜನಾ ಕೂಡಲೇ ಇಂದಿರಾನಗರ ಠಾಣೆಗೆ ದೂರು ನೀಡಿದ್ರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು, ಬಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಿದ್ದಪ್ಪ ಮೊಬೈಲ್ ವಶಕ್ಕೆ ಪಡೆದು ವಾಟ್ಸಪ್ ಚಾಟ್ ಪರಿಶೀಲಿಸಿದ್ದಾರೆ. ಆದರೆ ಆತ ಸಂಜನಾಗೆ ಮಾಡಿರುವ ಎಲ್ಲಾ ಮೆಸೇಜಸ್‍ಗಳನ್ನು ಡಿಲೀಟ್ ಮಾಡಿದ್ದಾನೆ. ಹೀಗಾಗಿ ಮೊಬೈಲ್ ಅನ್ನು ಮತ್ತೆ ರಿಟ್ರೀಲ್‍ಗೆ ಪೊಲೀಸರು ಕಳುಹಿಸಿದ್ದಾರೆ. ಇತ್ತ ಬಿದ್ದಪ್ಪ ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ; ಪ್ರೀತಿ ಅರಸಿ ಹೊರಟವನ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’Sign in to your account
Username or Email Address


Password

 Remember Me


