ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಇಡೀ ಕುಟುಂಬ (HD Revanna family) ಈಗ ಕಾನೂನು ಕಟ್ಟಳೆಯಲ್ಲಿ ಸಿಲುಕಿದೆ.ಕೆಲ ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ (Prajwal Revanna) ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂಬ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿತ್ತು. ಅಷ್ಟರಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೆಚ್.ಡಿ ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರೇವಣ್ಣ (Suraj Revanna) ಅವರ ಬಂಧನವಾಗಿದೆ.ಯಾರ ವಿರುದ್ಧ ಏನು ಪ್ರಕರಣ? 
ರೇವಣ್ಣ, ಮಾಜಿ ಸಚಿವ
ಆರೋಪ: ಕೆ.ಆರ್.ನಗರ ಮೂಲದ ಅತ್ಯಾಚಾರ ಸಂತ್ರಸ್ತೆ ಅಪಹರಣ
ಜೈಲು ಶಿಕ್ಷೆ ಬಳಿಕ ಜಾಮೀನುಭವಾನಿ, ರೇವಣ್ಣ ಪತ್ನಿ
ಆರೋಪ: ಕೆ.ಆರ್.ನಗರ ಮೂಲದ ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ
ಎಸ್‌ಐಟಿ ನೋಟಿಸ್ ಬಳಿಕ ನಿರೀಕ್ಷಣಾ ಜಾಮೀನುಪ್ರಜ್ವಲ್, ರೇವಣ್ಣ 2ನೇ ಮಗ
ಆರೋಪ: ಅತ್ಯಾಚಾರ, ಲೈಂಗಿಕ ದೌರ್ಜನ್ಯ
ಜೈಲು; ಸದ್ಯಕ್ಕೆ ಎಸ್‌ಐಟಿ ವಿಚಾರಣೆಸೂರಜ್, ರೇವಣ್ಣ ಮೊದಲ ಮಗ
ಆರೋಪ: ಅಸಹಜ ಲೈಂಗಿಕ ದೌರ್ಜನ್ಯ
ಹಾಸನ ಸೆನ್ ಪೊಲೀಸರಿಂದ ಬಂಧನ, ಸಿಐಡಿ ತನಿಖೆಗೆ ಕೇಸ್ ವರ್ಗರೇವಣ್ಣ ಕುಟುಂಬದ ಮೇಲೆ ಕಾನೂನು ಅಸ್ತ್ರ
ರೇವಣ್ಣ – ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ, ಕೆ.ಆರ್ ನಗರ ಪ್ರವೇಶ ಮಾಡುವಂತೆ ಇಲ್ಲ
ಭವಾನಿ – ನಿರೀಕ್ಷಣಾ ಜಾಮೀನು – ಮೈಸೂರು ಹಾಸನ ಪ್ರವೇಶ ಇಲ್ಲ
ಪ್ರಜ್ವಲ್ – 3 ಅತ್ಯಾಚಾರ ಪ್ರಕರಣ – ಸದ್ಯ ಸೋಮವಾರದ ವರೆಗೆ ಪೊಲೀಸ್ ಕಸ್ಟಡಿ – ಬಳಿಕ ಜೈಲು ಸಾಧ್ಯತೆ
ಸೂರಜ್ – ಜಾಮೀನು ರಹಿತ ಪ್ರಕರಣದಲ್ಲಿ ಅರೆಸ್ಟ್, ತನಿಖೆ ಪ್ರಗತಿಯಲ್ಲಿದೆ.Sign in to your account
Username or Email Address


Password

 Remember Me


