ಈ ಹಿಂದೆ ಸ್ಟಾರ್ ಕನ್ನಡಿಗ ಸಿನಿಮಾ ಮಾಡಿದ್ದ ತಂಡವು ಇದೀಗ ‘ಮೈಕಲ್ ಅಂಡ್ ಮಾರ್ಕೊನಿ’‌ ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ ನಟ ಪ್ರಶಾಂತ್ ಸಿದ್ದಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದಾರೆ. ಬ್ಲಾಕ್ ಬಿಲ್ಲಿ ಎಂಬ ಪಾತ್ರವನ್ನು ಅವರು ಪೋಷಣೆ‌ ಮಾಡುತ್ತಿದ್ದು, ಈಗಷ್ಟೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ನಂಬರ್ 18, ಏರಿಯಾ ನಂಬರ್-51 ಅಂತ ಬರೆದು ಕುತೂಹಲ ಮೂಡಿಸಿದೆ ಚಿತ್ರತಂಡ. ಇದನ್ನೂ ಓದಿ : ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್ಸ್ಟಾರ್ ಕನ್ನಡಿಗ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತು ಜೊತೆಗೆ ಬಣ್ಣ ಹಚ್ಚಿದ್ದ ಮಂಜುನಾಥ್ ವಿ ಆರ್ ಮೈಕಲ್ ಅಂಡ್ ಮಾರ್ಕೊನಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಶ್ರೀ ಮಂಜುನಾಥ್ ಪಿಕ್ಚರ್ಸ್ ನಡಿ ನಿರ್ಮಾಣವಾಗ್ತಿರುವ ಈ ಸಿನಿಮಾಗೆ ಹರೀಶ್ ಜೋಡಿ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ : ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣಪಕ್ಕ ಗ್ಯಾಂಗ್ ಸ್ಟಾರ್ ಕಥೆಯುಳ್ಳ, ರಾ ಥೀಮ್ ಕಾನ್ಸೆಪ್ಟ್ ನಲ್ಲಿ ತಯಾರಾಗುತ್ತಿರುವ ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದ ಟೈಟಲ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ಮೆಚ್ಚಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ. ಲೂಸ್ ಮಾದ ಯೋಗಿ ತಂಡಕ್ಕೆ ಹಾರೈಸಿದ್ದಾರೆ.Sign in to your account
Username or Email Address


Password

 Remember Me


