ಮೈಸೂರು: ಅಧಿಕಾರಿಗಳಿಗೆ ಹೆಂಡ್ತಿಗಿಂತ ಫೈಲ್ ಮೇಲೆ ಪ್ರೀತಿ ಜಾಸ್ತಿ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.ಇಂದು ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಸಂಸದರು ಗರಂ ಆದರು. ಅಧಿಕಾರಿಗಳಿಗೆ ಫೈಲ್ ಮೇಲೆ ಪ್ರೀತಿ ಜಾಸ್ತಿ ಇದೆ. ಆ ಪ್ರೀತಿಗಾಗಿ ತಮ್ಮ ಟೇಬಲ್‍ನಿಂದ ಫೈಲ್ ನಾ ಮುಂದಕ್ಕೆ ಕಳಿಸೋದೆ ಇಲ್ಲ. ಫೈಲ್ ಇಡ್ಕೊಂಡು ಕೂತು ಬಿಡುತ್ತಾರೆ. ಏನ್ ಕೆಲಸ ಮಾಡಿದ್ದೀರಾ ಅಂತಾ ಕೇಳಿದ್ರೆ, ಬರೀ ಹಳೆ ಸ್ಟೋರಿ ಹೇಳೋಕೆ ಶುರು ಮಾಡುತ್ತಾರೆ ಎಂದರು.ಇದೇ ವೇಳೆ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಅವರು ಜೆಡಿಎಸ್ ಶಾಸಕ ಸಾರಾ ಮಹೇಶ್ ಕಾಲೆಳೆದರು. ಏ.. ಮಂಜು ವಿಧಾನಸೌಧದಲ್ಲಿ ಚರ್ಚೆ ಮಾಡೋಕೆ ನೀವು ಬಿಡಲ್ಲ. ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿದ್ರೆ ಸರ್ಕಾರಕ್ಕೆ ಮುಟ್ಟಲ್ಲ. ನಾವು ಏನ್ ಮಾಡಬೇಕಪ್ಪ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸೂಕ್ಷ್ಮತೆ ಕಳೆದುಕೊಂಡ ಪಕ್ಷ: ಅಶ್ವಥ್ ನಾರಾಯಣಇನ್ನು ಸೀಮೆಎಣ್ಣೆ ನೀಡುವುದನ್ನು ಕೆ.ಆರ್. ನಗರ ಕ್ಷೇತ್ರಕ್ಕೆ ನಿಲ್ಲಿಸಿರುವುದನ್ನು ಸಾರಾ ಮಹೇಶ್ ಪ್ರಶ್ನಿಸಿದರು. ಜಿಲ್ಲೆಯ ಮೂರು ತಾಲೂಕುಗಳಿಗೆ ಮಾತ್ರ ಸೀಮೆಎಣ್ಣೆ ಕೊಡಲಾಗುತ್ತದೆ. ಉಳಿದ ತಾಲೂಕುಗಳಲ್ಲಿ ಸೀಮೆಎಣ್ಣೆ ನೀಡಲಾಗುತ್ತಿಲ್ಲ. ಕೆಆರ್ ನಗರ ಕ್ಷೇತ್ರದಲ್ಲಿ ಬಡವರು ಇಲ್ವಾ? ಪ.ಜಾತಿ, ಪ. ಪಂಗಡದವರು ಇಲ್ವಾ ಎಂದು ಕಿಡಿಕಾರಿದರು. ಈ ವೇಳೆ ಅಧಿಕಾರಿ, ಗ್ಯಾಸ್ ಬಳಕೆ ಹೆಚ್ಚಿರುವ ಕಾರಣ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಗಿಣಿಮೂಗಿನ ಹುಡುಗಿ ಜತೆ ಸಲ್ಲು ಸೀಕ್ರೆಟ್ ಮದುವೆ: ಫೋಟೋ ನೋಡಿ ನಕ್ಕರಾ ಸೋನಾಕ್ಷಿ ಸಿನ್ಹಾSign in to your account
Username or Email Address


Password

 Remember Me


