ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದುಗ್ಗುಬಾಟಿ ಕಾಂಬಿನೇಷನ್ ನ ‘ಭೀಮ್ಲಾ ನಾಯಕ್’ ಸಿನಿಮಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಧೂಳ್ ಎಬ್ಬಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೂಡಲೇ ಸಿನಿಮಾದ ಕೆಲ ಭಾಗಗಳನ್ನು ಕತ್ತರಿಸಿ, ನಾಯಕ ನಟ ಪವನ್ ಕಲ್ಯಾಣ್ ಅವರನ್ನು ಬಂಧಿಸಬೇಕು ಎಂದು ಕುಮ್ಮರಿ ಹಾಗೂ ಶಾಲಿವಾಹನ ಕಾರ್ಪೋರೇಷನ್ ಚೇರ್ಮನ್ ಪುರುಷೋತ್ತಮ ಎನ್ನುವವರು ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?ದೂರಿನಲ್ಲೇನಿದೆ?ಕುಂಬಾರಿಕೆ ಎನ್ನುವುದು ನಮ್ಮ ವೃತ್ತಿ, ಬದುಕಿನ ಭಾಗವೇ ಆಗಿ ಹೋಗಿದೆ. ನಾವು ಕುಂಬಾರಿಕೆಯನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಿಲ್ಲ. ಅದನ್ನು ದೇವರಂತೆ ಪೂಜಿಸುತ್ತೇವೆ. ಸಾಕಷ್ಟು ಧಾರ್ಮಿಕ ಕಾರ್ಯಗಳಲ್ಲಿ ನಾವು ತಯಾರಿಸಿದ ಮಡಿಕೆಯನ್ನು ಪೂಜಿಸುತ್ತಾರೆ. ಇಂತಹ ಪೂಜ್ಯನೀಯ ಮಡಿಕೆಯನ್ನು ನಟ ರಾಣಾ ದಗ್ಗುಬಾಟಿ ಅವರು ಕಾಲಿನಿಂದ ಒದೆಯುತ್ತಾರೆ. ಈ ದೃಶ್ಯವು ನಮಗೆ ನೋವನ್ನುಂಟು ಮಾಡಿದೆ. ಹಾಗಾಗಿ ಆ ದೃಶ್ಯವನ್ನು ಕೂಡಲೇ ತೆಗೆಯುವಂತೆ ಪುರುಷೋತ್ತಮ್ ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರುಕತ್ತರಿಸಬೇಕೆಂದಿರುವ ದೃಶ್ಯ ಯಾವುದು?ಭೀಮ್ಲಾ ನಾಯಕ್ ವಿರುದ್ಧದ ಸಾಹಸಮಯ ದೃಶ್ಯದಲ್ಲಿ ಭೀಮ್ಲಾ ಮತ್ತು ರಾಣಾ ದುಗ್ಗುಬಾಟಿ ಎದುರಾಗುತ್ತಾರೆ. ಅಲ್ಲಿ ಫೈಟ್ ಸನ್ನಿವೇಶವಿದೆ. ಅದೇ ಸ್ಥಳದಲ್ಲಿ ಮಡಿಕೆ ತುಂಬಿರುವ ಗಾಡಿಯನ್ನು ನಿಲ್ಲಿಸಲಾಗಿದೆ. ರಾಣಾ ಆ ಮಡಿಕೆಯನ್ನು ಒದೆಯುವ ಮೂಲಕ ಬಿಲ್ಡ್‍ಅಪ್ ತೋರಿಸುವ ದೃಶ್ಯ ಅದಾಗಿದೆ. ಈ ದೃಶ್ಯವನ್ನೇ ಚಿತ್ರದಿಂದ ಕೈ ಬಿಡಬೇಕು ಎನ್ನುವುದು ಪುರುಷೋತ್ತಮ್ ವಾದ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆಭೀಮ್ಲಾ ನಾಯಕ್ ಸಿನಿಮಾಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಸಿಎಂ ಜಗನ್ ಸರಕಾರಕ್ಕೂ ಭೀಮ್ಲಾ ಸಿನಿಮಾಗೂ ಸಂಬಂಧವಿದೆ ಎನ್ನುವ ಕಾರಣಕ್ಕಾಗಿ ಚಿತ್ರಕ್ಕೆ ಏನೆಲ್ಲ ತೊಂದರೆ ಕೊಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಅಲ್ಲಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ.Sign in to your account
Username or Email Address


Password

 Remember Me


