ಹಾವೇರಿ: ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ ಎಂದು ನವೀನ್ ಗ್ಯಾನಗೌಡರ್ ಅತ್ತಿಗೆ ಗೀತಾ ಕಣ್ಣೀರು ಹಾಕಿದ್ದಾರೆ.ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ. ನಮ್ಮ ಕುಟುಂಬಸ್ಥರಲ್ಲಿ ಅವನೊಬ್ಬನೇ ಓದಿರುವ ಯುವಕ. ಆತನ ಮೇಲೆ ತುಂಬಾ ಕನಸು ಕಂಡಿದ್ದೆವು. ಎಲ್ಲಾ ನುಚ್ಚುನೂರಾಯ್ತು. ಜೀವಂತವಾಗಿ ಆತನನ್ನು ಕೊನೆಗೂ ನೋಡಲಾಗಲಿಲ್ಲ. ಕನಿಷ್ಟ ಪಕ್ಷ ನನ್ನ ಮೈದುನನ ಮೃತದೇಹವನ್ನಾದರೂ ನೀಡಿ ಎಮದು ಅವರು ಅಂಗಲಾಚಿದರು. ಇದನ್ನೂ ಓದಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರಇತ್ತ ನವೀನ್ ಸಹೋದರ ಮಾತನಾಡಿ, ನನ್ನ ತಮ್ಮನಿಗೆ ಬಹಳಷ್ಟು ಕನಸು ಇದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸು ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ. ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೇ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ತಮ್ಮನ್ನು ಕಳೆದುಕೊಂಡು ಅಣ್ಣ ಹರ್ಷ ಬೇಸರ ವ್ಯಕ್ತಡಪಡಿಸಿದರು.Sign in to your account
Username or Email Address


Password

 Remember Me


