ಅಖಂಡ ಸಿನಿಮಾದ ನಂತರ ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿರುವ ನಂದಮೂರಿ ಬಾಲಕೃಷ್ಣ ಜತೆ ಹೊಸ ಸಿನಿಮಾದಲ್ಲಿ ನಟಿಸಲಾರೆ ಎಂದಿದ್ದಾರಂತೆ ಕನ್ನಡದ ಹುಡುಗಿ, ಟಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಕೃತಿ ಶೆಟ್ಟಿ. ಇನ್ನೂ ಹದಿನೆಂಟರ ಆಸುಪಾಸಿನಲ್ಲಿರುವ ಈ ನಟಿಯು ಬಾಲಯ್ಯನವರ ವಯಸ್ಸಿನ ಕಾರಣಕ್ಕಾಗಿ ನಟಿಸಲು ನಿರಾಕರಿಸಿರುವುದು ಭಾರೀ ಸುದ್ದಿ ಮಾಡಿದೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್“ನಂದಮೂರಿ ಅವರಿಗೆ ವಯಸ್ಸಾಗಿದೆ. ನನಗಿನ್ನೂ ಹದಿನೆಂಟರ ಹರೆಯ. ವಯಸ್ಸಿನ ಭಾರೀ ಅಂತರ ಇರುವ ನಟರ ಜತೆ ಈಗಲೇ ಕೆಲಸ ಮಾಡಿದರೆ, ನನ್ನ ಕೆರಿಯರ್  ತೊಂದರೆ ಆಗುತ್ತದೆ. ಹಾಗಾಗಿ ನಾನು ಬಾಲಯ್ಯ ಅವರ ಚಿತ್ರದಲ್ಲಿ ನಟಿಸಲಾರೆ” ಎಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲು ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಕೃತಿ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೃತಿ ಜಾಗಕ್ಕೆ ಸದ್ಯ ಶ್ರುತಿ ಹಾಸನ್ ಬಂದಿದ್ದಾರಂತೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳುಕನ್ನಡತಿ ಕೃತಿ ಶೆಟ್ಟಿ ಈ ಸಿನಿಮಾದಿಂದ ಹೊರ ನಡೆದಿದ್ದರೂ, ಮತ್ತೋರ್ವ ಕನ್ನಡದ ನಟ ದುನಿಯಾ ವಿಜಯ್, ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ಗೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ. ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.Sign in to your account
Username or Email Address


Password

 Remember Me


