ಇಂದು ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರೊಮೊಷನ್ ಸಾಂಗ್ ‘ಟ್ರೇಡ್ ಮಾರ್ಕ್’ ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲೇ ಈ ಹಾಡು ವೈರಲ್ ಆಗಿದ್ದು, ಈ ಸಿನಿಮಾದ ಕೆಲ ಹಾಡಿಗೆ ಪುನೀತ್ ಅವರು ಹಾಕಿದ ಸ್ಟೆಪ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದನ್ನೂ ಓದಿ : ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್ನಟನೆಯಷ್ಟೇ ನೃತ್ಯದಲ್ಲೂ ಪುನೀತ್ ಪಳಗಿದವರು. ಕೆಲವು ಸಲ ಸಿನಿಮಾ ಗೆಲ್ಲದಿದ್ದರೂ, ಹಾಡುಗಳು ಸೂಪರ್ ಹಿಟ್ ಆದ ಉದಾಹರಣೆಗಳು ಕೂಡ ಇವೆ. ಅದರಲ್ಲೂ ಹಾಡಿಗಾಗಿ ಅವರು ಹಾಕುವ ಸ್ಟೆಪ್ ಕೂಡ ವಿಭಿನ್ನವಾಗಿರುತ್ತವೆ. ಹಾಗಾಗಿ ಅಪ್ಪು ಡಾನ್ಸ್ ಅಂದರೆ ಎಲ್ಲರಿಗೂ ಇಷ್ಟ. ಜೇಮ್ಸ್ ನಲ್ಲೂ ಅವರು ಪವರ್ ಫುಲ್ ಆಗಿಯೇ ನೃತ್ಯ ಮಾಡಿದ್ದಾರೆ. ಇದೀಗ ಬಿಡುಗಡೆ ಆಗಿರುವ ಪ್ರಮೋಷನಲ್ ಸಾಂಗ್ ನಲ್ಲಿ ಒಂದಷ್ಟು ತುಣುಕುಗಳನ್ನು ಹಾಕಿದ್ದಾರೆ ನಿರ್ದೇಶಕರು. ಈ ನೃತ್ಯವೇ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಇಂತಹ ಡಾನ್ಸಿಗಾದರೂ ನೀವು ಇರಬೇಕಿತ್ತು ಎನ್ನುವ ಭಾವುಕ ನುಡಿಗಳನ್ನು ಅಭಿಮಾನಿಗಳು ಆಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ವಿಶೇಷ: ತೆರೆಗೆ ಶಿವನಾಗಿ ದರ್ಶನ ಕೊಟ್ಟ ನಟ ಶಿವರುಟ್ರೇಡ್ ಮಾರ್ಕ್ ಇದೊಂದು ಲಿರಿಕಲ್ ವಿಡಿಯೋ ಆಗಿದ್ದು, ಜೇಮ್ಸ್ ಸಿನಿಮಾದ ಮುಹೂರ್ತದಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡುವ ದೃಶ್ಯದಿಂದ ಶುರುವಾಗುತ್ತದೆ. ಚಂದನ್ ಶೆಟ್ಟಿ, ಆಶಿಕಾ ರಂಗನಾಥ್, ಶ್ರೀಲೀಲಾ, ಮೋಹನ್ ಮೊದಲಾದವರು ಸ್ಟೆಪ್ ಹಾಕಿದ್ದಾರೆ. ಅಲ್ಲದೇ, ಜೇಮ್ಸ್ ಸಿನಿಮಾದ ಹಾಡಿನ ಕೆಲ ತುಣುಕುಗಳನ್ನೂ ಈ ವಿಡಿಯೋದಲ್ಲಿ ಹಾಕಲಾಗಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಟ್ರೇಡ್ ಮಾರ್ಕ್ ಗೀತೆಗೆ ವಿಕ್ಕಿ, ಅದಿತಿ ಸಾಗರ್ ಮತ್ತು ಚಂದನ್ ಶೆಟ್ಟಿ, ಶರ್ಮಿಳಾ, ಯುವ ರಾಜ್ ಕುಮಾರ್ ಮತ್ತು ಚರಣ್ ರಾಜ್ ದನಿಯಾಗಿದ್ದಾರೆ. ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡು ಮೂಡಿ ಬಂದಿದೆ.Sign in to your account
Username or Email Address


Password

 Remember Me


