ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾದ ಹಾಡೊಂದು ಶಿವರಾತ್ರಿಯ ದಿನದಂದು ಬಿಡುಗಡೆ ಆಗುತ್ತಿದೆ. ಹಾಡು ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದ್ದು, ನೆಚ್ಚಿನ ನಟನ ಗೀತೆಯನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದ್ಧೂರಿಯಾಗಿಯೇ ಹಾಡನ್ನು ಬರಮಾಡಿಕೊಳ್ಳಲು ವೇದಿಕೆಯನ್ನೂ ಸಜ್ಜುಗೊಳಿಸಿದ್ದಾರೆ.ಜೇಮ್ಸ್ ಸಿನಿಮಾದ ಮೊದಲ ಹಾಡಾಗಿ ಟ್ರೇಡ್ ಮಾರ್ಕ್ ಗೀತೆ ರಿಲೀಸ್ ಆಗುತ್ತಿದ್ದು, ಈವರೆಗಿನ ಎಲ್ಲ ದಾಖಲೆಗಳನ್ನೂ ಬ್ರೇಕ್ ಮಾಡುವ ಸೂಚನೆ ಸಿಕ್ಕಿದೆ. ಈಗಾಗಲೇ ರಿಲೀಸ್ ಆಗಿದ್ದ ಜೇಮ್ಸ್ ಚಿತ್ರದ ಟೀಸರ್ ಎಲ್ಲ ರೂಲ್ಸ್ ಬ್ರೇಕ್ ಮಾಡಿ, ದಾಖಲೆ ಸೃಷ್ಟಿಸಿತ್ತು. ಹಾಡು ಕೂಡ ಹಾಗೆಯೇ ಆಗಲಿದೆ ಎನ್ನುತ್ತಿದೆ ಚಿತ್ರತಂಡ.ಪವರ್ ಸ್ಟಾರ್ ಟ್ರೇಡ್ ಸಾಂಗ್ ರಿಲೀಸ್ ಗೆ ಬೆಂಗಳೂರಿನ ವಿಜಯನಗರದ ಬಿಜಿಎಸ್ ಮೈದಾನ ಸಿದ್ಧವಾಗಿದ್ದು, ಅಲ್ಲಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಬೆಳಗ್ಗೆ 11.11 ನಿಮಿಷಕ್ಕೆ ಜೇಮ್ಸ್ ಗ್ಲಿಂಪ್ಸ್ ಜೊತೆ ಲಿರಿಕಲ್ ಸಾಂಗ್ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಮೋಷನಲ್ ಗೀತೆಗೆ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀ ಲೀಲಾ ಹೆಜ್ಜೆ ಹಾಕುತ್ತಿರುವುದು ಮತ್ತೊಂದು ವಿಶೇಷ. ಅಲ್ಲದೇ, ಯುವರಾಜ್ ಕುಮಾರ್ ಕಂಠದಲ್ಲಿ ಕೆಲವು ಸಾಲು ಕೇಳುವ ಅವಕಾಶವನ್ನು ಅಭಿಮಾನಿಗಳಿಗಾಗಿ ಕಲ್ಪಿಸಲಾಗಿದೆ. Sign in to your account
Username or Email Address


Password

 Remember Me


