ಚಂದನವನದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇಂದು ಜೈಲಿನಿಂದ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಖತ್ ಖುಷ್ ಆಗಿ ಸಂಭ್ರಮಾಚರಿಸಿದ್ದಾರೆ.ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ ಆರೋಪದಲ್ಲಿ ಚೇತನ್ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಶುಕ್ರವಾರವೇ ಇವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ಆದೇಶ ಪ್ರತಿ ಲಭ್ಯವಾಗುವುದು ತಡವಾದ ಹಿನ್ನೆಲೆಯಲ್ಲಿ ಅವರು ಇಂದು ಸಂಜೆ ಬಿಡುಗಡೆಯಾಗಿದ್ದಾರೆ.ಚೇತನ್ ಅವರು ಒಂದು ವಾರದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಬಳಿಕ ಅವರು ಇಂದು ಬಿಡುಗಡೆಯಾಗಿದ್ದಾರೆ. ಚೇತನ್ ಅವರ ಬಿಡುಗಡೆಗಾಗಿ ವಕೀಲರಾದ ಬಾಲನ್, ಹರಿರಾಮ್ ಎ., ಕಾಶಿನಾಥ್ ಜೆ.ಡಿ., ರಮೇಶ್, ಪ್ರಸನ್ನ, ಸುನೀಲ್ ಕುಮಾರ್ ಗುನ್ನಾಪುರ ಮತ್ತು ಅವರ ತಂಡ ಸತತವಾಗಿ ಪ್ರಯತ್ನಿಸಿತ್ತು. ಇದನ್ನೂ ಓದಿ:  ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿಚೇತನ್ ಅವರ ಬಿಡುಗಡೆ ಹಿನ್ನೆಲೆ ಅವರ ಅಭಿಮಾನಿಗಳು, ಚಳುವಳಿ ಸ್ನೇಹಿತರು ಬಹಳ ಅದ್ದೂರಿಯಾಗಿ ಅವರನ್ನು ಸ್ವಾಗತಿಸಿಗೊಂಡಿದ್ದಾರೆ. ಪತ್ನಿ ಮೇಘಾ.ಎಸ್ ಚೇತನ್ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


