ರಚಿತಾ ರಾಮ್ ಬೇಸರಗೊಂಡಿದ್ದಾರೆ. ಹೀಗೆ ಅವರು ಬೇಸರಗೊಳ್ಳುವುದು ಇದೇ ಮೊದಲೇನೂ ಅಲ್ಲ. ಹಾಟ್ ಹಾಟ್ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಾಗೆಲ್ಲ ಅವರು ಬೇಸರ ಹೊರಹಾಕುತ್ತಾರೆ. ಇದನ್ನೂ ಓದಿ : ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್ಈ ಹಿಂದೆ ಉಪೇಂದ್ರ ನಟನೆಯ ‘ಐ ಲವ್ ಯೂ’ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಡಿಂಪಲ್ ಕ್ವೀನ್ ಕಾಣಿಸಿಕೊಂಡಿದ್ದರು. ಅದನ್ನು ನಿರ್ದೇಶಕ ಆರ್.ಚಂದ್ರು ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಚಿತಾ ಬೇಸರಗೊಂಡಿದ್ದರು. ನಾನು ಅಂತಹ ದೃಶ್ಯಗಳಲ್ಲಿ ನಟಿಸಬಾರದಿತ್ತು. ನನ್ನ ತಂದೆ ಕೂಡ ಅದನ್ನು ಒಪ್ಪಲಿಲ್ಲ. ಐ ಯ್ಯಾಮ್ ಸ್ಸಾರಿ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟಇನ್ಮುಂದೆ ರಚಿತಾ ರಾಮ್ ಅಂತ ಸನ್ನಿವೇಶಗಳಲ್ಲಿ ಯಾವುದೇ ಕಾರಣಕ್ಕೂ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹೊತ್ತಿಗೆ ‘ಲವ್ ಯೂ ರಚ್ಚು’ ಚಿತ್ರ ಹೊರ ಬಂದಿತ್ತು. ಅರೇ, ಅಲ್ಲಿಯೂ ಅದೇ ಕಥೆ. ಇವರೇ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಷರತ್ತು ಹಾಕಿದ್ದವರು, ಅಜಯ್ ರಾವ್ ಜತೆ ಅಂಥದ್ದೊಂದು ಸೀನ್ ನಲ್ಲಿ ಮತ್ತೆ ನಟಿಸಿದ್ದರು. ಆಗಲೂ, ಅವರನ್ನು ‘ನೀವೇಕೆ ಅಂತಹ ದೃಶ್ಯದಲ್ಲಿ ಕಾಣಿಸಿಕೊಂಡಿರಿ?’ ಎನ್ನುವ ಪ್ರಶ್ನೆ ಎದುರಾಯಿತು. ಅವತ್ತು ರಾಂಗ್ ಆದರು. ಪ್ರಶ್ನೆ ಕೇಳಿದವರಿಗೆ “ಫಸ್ಟ್ ನೈಟ್ನಲ್ಲಿ ನೀವೇನು ಮಾಡ್ತೀರಿ” ಎಂದು ಮರು ಪ್ರಶ್ನೆ ಹಾಕಿ ಟ್ರೋಲ್ ಆದರು. ಇದು ತಣ್ಣಗಾಗಿತು ಅನ್ನುವಷ್ಟರಲ್ಲಿ ಮತ್ತೊಂದು ಸಿನಿಮಾ ತೆರೆಗೆ ಅ‍ಪ್ಪಳಿಸಿ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?ಪ್ರೇಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯಂತೂ ಅವರು ಸಖತ್ ರಾಂಗ್ ಆಗಿದ್ದಾರೆ. ನಾನು ನಟಿಸಿದ ಬೋಲ್ಡ್ ಪಾತ್ರಗಳು ಮಾತ್ರ ನಿಮಗೆ ಕಾಣ್ತಿವೆಯಾ ಅಂತ ರಾಂಗ್ ಆಗಿದ್ದಾರೆ. ಹೌದು, ಒಬ್ಬ ನಟಿಯಾಗಿ ಯಾವ ರೀತಿಯ ಪಾತ್ರ ಮಾಡಬೇಕು, ಮಾಡಬಾರದು ಎನ್ನುವ ಅರಿವು ಅವರಿಗಿರುತ್ತದೆ. ಕಥೆ ಕೇಳುವಾಗಲೇ ಅವರು ಅಂತಹ ಪಾತ್ರ ಅಥವಾ ದೃಶ್ಯಗಳಿಗೆ ಒಪ್ಪಿಗೆ ಸೂಚಿಸಿಯೇ ನಟಿಸಿರುತ್ತಾರೆ. ಅದು ಅವರ ಆಯ್ಕೆ. ಆದರೆ, ಇಂತಹ ಪಾತ್ರ ಮಾಡಿದ್ದಕ್ಕೆ ಮತ್ತೆ ರಚ್ಚು ತಕರಾರು ತಗೆದಿದ್ದಾರೆ. ನಾನು ಆ ರೀತಿಯ ಪಾತ್ರವನ್ನು ಮಾಡಲೇಬಾರದು ಎನ್ನುವ ಪ್ರಶ್ನೆಯನ್ನೂ ಈ ಬಾರಿ ಹಾಕಿದ್ದಾರೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳುಯಾಕೋ ಗೊತ್ತಿಲ್ಲ ಇಂತಹ ಪಾತ್ರಗಳನ್ನು ಮಾಡಿದಾಗೆಲ್ಲ ರಚಿತಾ ರಾಮ್ ಗಲಿಬಿಲಿಗೊಳ್ಳುತ್ತಾರೆ. ಅದರಿಂದ ದಾಟಿಕೊಳ್ಳುವ ಮಾರ್ಗ ಮಾತ್ರ ಅವರಿಗೆ ಗೊತ್ತಾಗುತ್ತಿಲ್ಲ.Sign in to your account
Username or Email Address


Password

 Remember Me


